ವಕೀಲರ ಸಹಕಾರ: ಹೆಚ್ಚು ಪ್ರಕರಣ ಇತ್ಯರ್ಥ-ನ್ಯಾ. ಸಿ.ವಿ.ಸನತ

ಸಿಂಧನೂರು.ನ.೯- ವಕೀಲರು ತಮ್ಮ ವೃತ್ತಿಯಲ್ಲಿ ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಕಾನೂನು ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಕಾನೂನುಗಳ ಬಗ್ಗೆ ಕಾನೂನುಗಳ ಪ್ರಾಧಿಕಾರದಿಂದ ಪ್ರತಿವರ್ಷ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಅರಿವು ಹಾಗೂ ನೆರವು ನೀಡಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ವಿ.ಸನತ ಹೇಳಿದರು.
ನಗರದ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚಾರಣೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಯಚೂರು ಜಿಲ್ಲೆಯ್ಲಿಯೇ ಅತಿ ಹೆಚ್ಚು ಕೇಸುಗಳನ್ನು ರಾಜೀ ಸಂದಾನ ಮೂಲಕ ಇತ್ಯರ್ಥಪಡಿಸಲಾಗಿದೆ . ಇದರಿಂದ ಕಕ್ಷಿದಾರರು ಹಾಗೂ ನ್ಯಾಯವಾದಿಗಳಿಗೆ ಬಹಳ ಅನುಕೂಲವಾಗಿ ಶೀಘ್ರದಲ್ಲಿ ನ್ಯಾಯ ಪಡೆದುಕೊಳ್ಳಲು ಅನುಕೂಲವಾಗಿದೆ ಎಂದರು.
ಸಿವಿಲ್ ಕೇಸುಗಳನ್ನು ವಕೀಲರು ಆಸಕ್ತಿವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜೀ ಸಂದಾನ ಮೂಲಕ ಇತ್ಯರ್ಥಪಡಿಸಬೇಕು ಹಾಗೂ ಅರ್ಜಿ ಮತ್ತು ದಾವಾಗಳನ್ನು ಸಹ ರಾಜೀ ಸಂದಾನ ಮೂಲಕ ಇತ್ಯರ್ಥಪಡಿಸುವುದು ಸೂಕ್ತ. ಇದರಿಂದ ಕಕ್ಷಿದಾರರಿಗೆ ಅನುಕೂಲವಾಗುತ್ತದೆ. ಕಾನೂನುಗಳ ಅರಿವು ಬಗ್ಗೆ ವಕೀಲರು ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಮನಮುಟ್ಟುವಂತೆ ತಿಳಿಸಿ ರಾಜೀ ಮಾಡಬೇಕು. ಡಿ. ೧೯ ರಂದು ಲೋಕ ಅದಾಲತ ನಿಗದಿಯಾಗಿದ್ದು, ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಕೇಸುಗಳನ್ನು ಇತ್ಯರ್ಥಪಡಿಸಿ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಲೋಕ ಅದಾಲತ್ ಯಶಸ್ವಿಯಾಗಲು ವಕೀಲರ ಸಹಕಾರ ಕೇಳುವ ನ್ಯಾಯಾಧೀಶರು ನಮಗೂ ಸಹ ನೀವು ಸಹಕಾರ ನೀಡಬೇಕು. ಕೊರೊನಾ ಇರುವುದರಿಂದ ಆರೋಪಿಗಳು ಬಾರದಂತೆ ಆದೇಶ ಮಾಡಿದ್ದು, ಈಗ ಬೇಲ್ ರದ್ದುಪಡಿಸಿ ಆರೋಪಿಗಳನ್ನು ಕಸ್ಟಡಿಗೆ ಕಳುಹಿಸುವುದು ಸರಿಯಲ್ಲ. ಇದರಿಂದ ನಮ್ಮಿಂದ ನಿಮಗೆ ನಿರೀಕ್ಷೆ ಮಟ್ಟದಲ್ಲಿ ಸಹಕಾರ ನೀಡಲು ಆಗುವುದಿಲ್ಲ. ನೀವು ಸಹ ನಮಗೆ ಸಹಕಾರ ನೀಡಬೇಡಿ ಎಂದು ತಾಲ್ಲೂಕು ನ್ಯಾಯಾಲಯದ ಸಂಘದ ಅಧ್ಯಕ್ಷ ಎನ್. ರಾಮನಗೌಡ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಆವರಣದಲ್ಲಿರುವ ಬಾತ್ ರೂಂ ಮೋಟಾರ್ ಹಾಗೂ ಬಾರ್ ಅಸೋಸಿಯೇಶನ್ ಕೊಠಡಿಯ ಟಿ.ವಿ. ಕಳವು ಆಗಿದ್ದು ಇದರ ಬಗ್ಗೆ ಯಾರು ಜವಾಬ್ದಾರರು. ವಿದ್ಯಾವಂತರೆ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದಾರೆ . ಸಂವಿಧಾನ ಆಶಯಗಳನ್ನು ಎಲ್ಲರೂ ಎತ್ತಿ ಹಿಡಿಯಬೇಕು. ಸರ್ಕಾರ ನ್ಯಾಯಾಲಯ ಹಾಗೂ ವಕೀಲರ ಮಧ್ಯೆ ಕಾನೂನು ತಿದ್ದುಪಡಿಗಾಗಿ ಹೋರಾಟ ನಡೆಯುತ್ತಿದ್ದು ಎಲ್ಲರಿಗೆ ಒಪ್ಪಿಗೆಯಾಗುವಂತೆ ಕಾನೂನುಗಳನ್ನು ಜಾರಿಗೆ ತರಬೇಕೆಂದು ಮನವಿ ಮಾಡಿಕೊಂಡರು.
ವಕೀಲರ ಸಂಘದ ಕಾರ್ಯದರ್ಶಿ ಸುರೇಶರೆಡ್ಡಿ ಚನ್ನಳ್ಳಿ ಸರ್ಕಾರಿ ಅಭಿಯೋಜಕರಾದ ನಾಗರಾಜ.ಬಿ. ಎಂ.ಎಚ್.ಕೆ. ಯಾದವ ವೇದಿಕೆಯ ಮೇಲಿದ್ದರು. ಎಂ.ಆನಂದಕುಮಾರ ವಕೀಲರು ಗೊರೇಬಾಳ ರಾಷ್ಟ್ರೀಯ ಕಾನೂನು ಸೇವೆ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.