
ಚಾಮರಾಜನಗರ ಫೆ.25:- ವಕೀಲ ಸಮುದಾಯದ ಬಹುದಿನದ ಬೇಡಿಕೆಯಾದ ವಕೀಲರ ಸಂರಕ್ಷಣಾ ಕಾಯ್ದೆ ಯನ್ನು ರಾಜ್ಯ ಸರ್ಕಾರ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಚಾರ ನಿμÉೀಧ ವಿಧೇಯಕ- 2023 ಅನ್ನು ಅಂಗಿಕಾರ ಮಾಡಿರುವುದನ್ನು ಚಾಮರಾಜನಗರ ಜಿಲ್ಲಾ ವಕೀಲರ ಅಭಿನಂದಿಸಿದೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ನೇತೃತ್ವದಲ್ಲಿ ಸಂಘದ ಸದಸ್ಯರು ಸಭೆ ಸೇರಿ ಸಂರಕ್ಷಣಾ ಕಾಯ್ದೆ ಅಂಗಿಕಾರವಾಗಿರುವ ಹಿನ್ನೆಲೆಯಲ್ಲಿ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಮತ್ತು ನ್ಯಾಯಾಂಗ ಇಲಾಖೆ ನೌಕರರಿಗೆ ಸಿಹಿ ಹಂಚಿ ಹರ್ಷ ವ್ಯಕ್ತ ಪಡಿಸಿದರು.
ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ರಾಜ್ಯದಲ್ಲಿ ವಕೀಲರ ಮೇಲೆ ದಿನೇ ದಿನೇ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ, ಪೆÇೀಲಿಸ್ ದೌರ್ಜನ್ಯಗಳು ನಡೆಯುತ್ತಿದ್ದವು. ಇವುಗಳ ವಿರುದ್ದ ಹಲವು ವರ್ಷಗಳಿಂದ ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ಪ್ರತಿಭಟನೆಗಳ ಮೂಲಕ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಹಲವಾರು ಬಾರಿ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವು. ಆದರು ಕೂಡ ಯಾವುಧೆ ಪ್ರತಿಫಲ ದೊರೆತಿರಲಿಲ್ಲ. ಕಳೆದ ಡಿಸೆಂಬರ್ 13 ರಂದು ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸಂರಕ್ಷಣಾ ಕಾಯ್ದೆ ಜಾರಿಗಾಗಿ ಮನವಿ ಕೂಡ ಸಲ್ಲಿಸಿದ್ದೆವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಾರಿ ಮಾಡುವ ಭರವಸೆಯನ್ನು ನೀಡಿದ್ದರು. ಜೊತೆಗೆ ರಾಜ್ಯದ ಎಲ್ಲಾ ವಕೀಲರ ಸಂWಗಳು ನಿರಂತರ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನವನ್ನು ಸೆಳೆದಿದ್ದರು ಇದರ ಹೋರಾಟದ ಫಲವಾಗಿ ಇಂದು ವಕೀಲರ ಸಂರಕ್ಷಣಾ ಕಾಯ್ದೆ ಅಂಗಿಕಾರವಾಗಿದೆ. ಇದು ವಕೀಲರ ಹೋರಾಟಕ್ಕೆ ಸಂದ ಫಲವಾಗಿದೆ ಎಂದರು.
ಈ ವಿಧೇಯಕದಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನಿಂದ ಪ್ರಮಾಣ ಪತ್ರವನ್ನು ಹೊಂದಿರುವ ವಕೀಲರ ಮೇಲೆ ಯಾವುದೇ ವ್ಯಕ್ತಿಗಳು ಹಲ್ಲೆ, ದೌರ್ಜನ್ಯಗಳನ್ನು ನಡೆಸಿದರೆ, ವಕೀಲರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಈ ಕಾನೂನಿನ ಅಡಿಯಲ್ಲಿ 3ವರ್ಷಗಳ ಕಾಲ ಶಿಕ್ಷೆ, ಒಂದು ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಮಂಜು ಹರವೆ, ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ, ಖಜಾಂಚಿ ಆರ್.ಗಿರೀಶ್, ಜಂಟಿ ಕಾರ್ಯದರ್ಶಿ ಮಲ್ಲು, ಹಿರಿಯ ವಕೀಲರಾದ ಪುಟ್ಟರಾಜು, ಆರ್.ವಿರೂಪಾಕ್ಷ, ಎಂ. ಶಿವಲಿಂಗೇಗೌಡ, ವಿ.ನಾಗರಾಜೇಂದ್ರ, ಕೆ.ಎಸ್.ಗಣೇಶ್‍ಪ್ರಸಾದ್, ಬಿ.ಜಿ.ಜಯಪ್ರಕಾಶ್, ನಂಜುಂಡಯ್ಯ, ಹೆಚ್,ಎನ್.ಲೋಕೇಶ್, ಎಂ.ಶಿವರಾಮ್, ಜೆ.ಸುಬ್ರಮಣ್ಯ, ನಾಗಮ್ಮ, ಎಂ.ಆರ್.ಸವಿತಾ, ಎಂ.ನಂಜುಂಡಸ್ವಾಮಿ, ಉದಯರಂಗÀ, ಆರ್, ರಂಗಸ್ವಾಮಿ, ಸುಮಲತಾ, ಮಂಜುಳ, ರಾಜೇಶ್ವರಿ, ಹೆಚ್.ಎಸ್.ಮಹೇಂದ್ರ, ಕುಮಾರ್, ಮಹದೇವಸ್ವಾಮಿ, ಸಿದ್ದರಾಜು ವಕೀಲರ ಸಂಘದ ಸದಸ್ಯರು ಹಾಜರಿದ್ದರು.