ವಕೀಲರ ಸಂಘದ ಮಹಡಿಯ ಶಂಕುಸ್ಥಾಪನೆ


ಗದಗ,ಏ.16:ಜಿಲ್ಲಾವಕೀಲರ ಸಂಘದ 1ನೇ ಹಾಗೂ 2ನೇ ಮಹಡಿಕಟ್ಟಡಕಾಮಗಾರಿಉತ್ತಮವಾಗಿ ನಡೆದುಜಿಲ್ಲೆಯಲ್ಲಿ ವಕೀಲರ ಸಂಘ ಇನ್ನಷ್ಟುಅಭಿವೃದ್ಧಿ ಹೊಂದಲಿ ಎಂದುಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿಗಳು ಹಾಗೂಗದಗಜಿಲ್ಲಾಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿಅವರು ನುಡಿದರು.
ಅವರು ಶನಿವಾರಗದಗ ನಗರದಜಿಲ್ಲಾ ನ್ಯಾಯಾಲಯದಆವರಣದಲ್ಲಿರುವಗದಗಜಿಲ್ಲಾ ವಕೀಲರ ಸಂಘದಕಟ್ಟಡದ 1ನೇ ಹಾಗೂ 2ನೇ ಮಹಡಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ ವಕೀಲರಿದ್ದಾರೆ, ವಕೀಲರ ಸಂಖ್ಯೆಗನುಗುಣವಾಗಿ ಸಂಘದ ಹೆಚ್ಚುವರಿಕಟ್ಟಡಕಾಮಗಾರಿ ನಡೆಯುತ್ತಿರುವುದು ಸಂತಸದ ವಿಚಾರ.ಜಿಲ್ಲೆಯ ವಕೀಲರು ಏನೇ ಸಮಸ್ಯೆಗಳಿದ್ದರೂ ಅದನ್ನುತಮ್ಮಗಮನಕ್ಕೆ ತಂದರೆತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಗೌರವಾನ್ವಿತಅತಿಥಿಗಳಾಗಿ ಪಾಲ್ಗೊಂಡಿದ್ದಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂಕೌಟುಂಬಿಕ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀಮತಿಎಂ.ಜಿ.ಉಮಾಅವರು ಮಾತನಾಡಿ, ಓರ್ವ ಮಹಿಳಾ ನ್ಯಾಯವಾದಿಗೆಕುಟುಂಬ ಸದಸ್ಯರ ಸಹಕಾರದೊರೆತರೆಆಕೆ ತನ್ನಕ್ಷೇತ್ರದಲ್ಲಿ ಏನೂ ಬೇಕಾದರೂ ಸಾಧನೆ ಮಾಡಬಲ್ಲಳು ಎಂಬುದಕ್ಕೆ ನಾನೇ ಸಾಕ್ಷಿಎಂದಅವರು, ಗದಗಜಿಲ್ಲೆಯಲ್ಲಿತಾವು ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ ದಿನಗಳನ್ನು ಹಾಗೂ ತಮಗೆ ಮಾರ್ಗದರ್ಶನ ನೀಡಿದ ಹಿರಿಯ ವಕೀಲರನ್ನು ಸ್ಮರಿಸಿದರು.
ಇನ್ನೋರ್ವಗೌರವಾನ್ವಿತಅತಿಥಿಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಉಮೇಶ ಎಂ.ಅಡಿಗಅವರು ಮಾತನಾಡಿ, ವಕೀಲರಿಗೆಓದು ಬಹಳ ಮುಖ್ಯವಾಗಿದ್ದುಅದಕ್ಕೆಓದುವ ಹವ್ಯಾಸ ಮುಖ್ಯವಾಗಿದೆ, ಜತೆಗೆಗ್ರಂಥಾಲಯ ಬೇಕು.ಪಕ್ಷಗಾರರಿಗೆ ನ್ಯಾಯದೊರಕಬೇಕಾದರೆ ವಕೀಲರ ಪರಿಶ್ರಮಅವಶ್ಯಎಂದಅವರು, ವಕೀಲರ ಸಂಘದ 1 ಹಾಗೂ 2ನೇ ಮಹಡಿಕಟ್ಟಡಕಾಮಗಾರಿ ಆರಂಭಿಸಿರುವುದು ಶ್ಲಾಘನೀಯ, ಕಟ್ಟಡ ನಿರ್ಮಾಣ ಮಾಡುವುದರಜತೆಗೆಅದನ್ನುಸದ್ಬ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜಅವರು ಮಾತನಾಡಿ, ಇಂದಿನ ಡಿಜಿಟಲ್‍ಯುಗದಲ್ಲಿ ಇ-ಲೈಬ್ರರಿಯ ಪಾತ್ರ ಪ್ರಮುಖವಾಗಿದ್ದು, ಯುವ ವಕೀಲರು ವೃತ್ತಿಯಲ್ಲಿ ಪರಿಣಿತಿ ಹೊಂದಬೇಕುಎಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದಅಧ್ಯಕ್ಷರಾದ ಎಂ.ಐ.ಹಿರೇಮನಿಪಾಟೀಲ ಪ್ರಾಸ್ತಾವಿಕ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಬಿ.ಎಚ್.ಮಾಡಲಗೇರಿ ವಂದಿಸಿದರು.ಸಂಗೀತಗಾರರಾದ ಪಂ.ವೆಂಕಟೇಶಅಲಕೋಡ ಹಾಗೂ ಸಂಗಡಿಗರು ಪ್ರಾರ್ಥಿಸಿ, ನಾಡಗೀತೆ ಪ್ರಸ್ತುತಪಡಿಸಿದರು.ಕಾರ್ಯಕ್ರಮದಲ್ಲಿ ಸಂಘದಉಪಾಧ್ಯಕ್ಷರಾದ ಎ.ಎಂ. ಹದ್ಲಿ, ಖಜಾಂಚಿ ವಿಜಯಎಚ್ ಮೇರವಾಡೆ, ಸಹ ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ ಸೇರಿದಂತೆಜಿಲ್ಲೆಯ ನ್ಯಾಯವಾದಿಗಳು ಉಪಸ್ಥಿತರಿದ್ದರು.ಹಿರಿಯ ವಕೀಲರಾದ ಜಿ.ಸಿ. ರೇಶ್ಮಿಅವರುಕಾರ್ಯಕ್ರಮ ನಿರೂಪಿಸಿದರು.