ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ

ಕೋಲಾರ,ಜೂ,೯- ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಎನ್.ಬೈರಾರೆಡ್ಡಿ ರವರು ವಕೀಲರ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜವಾಬ್ದಾರಿಯನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನೂತನ ಅಧ್ಯಕ್ಷ ಎಂ.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಎನ್.ಬೈರಾರೆಡ್ಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್, ಹಿರಿಯ ಮತ್ತು ಕಿರಿಯ ನ್ಯಾಯಾಧೀಶರು ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಧರ್, ರಘುನಾಥಗೌಡ, ಫಯಾಜ್, ವಕೀಲರಾದ ಎಲ್.ಶ್ರೀನಿವಾಸ್, ಬಿ.ಕೆ.ದೇವರಾಜ್, ಬಿ.ಸಿ.ದೇವರಾಜ್, ರವೀಂದ್ರ, ನರಸಿಂಹಯ್ಯ, ಪಿ.ಎನ್.ಕೃಷ್ಣಾರೆಡ್ಡಿ, ಸಿ.ಬಿ.ಜಯರಾಮ್, ಧನರಾಜ್, ಎ.ವಿ.ಆನಂದ್, ಹೆಚ್.ವೆಂಕಟರಾಮ್, ರಾಮಲಿಂಗೇಗೌಡ, ಎನ್.ಡಿ.ಶ್ರೀನಿವಾಸ್, ಸುಮನ್, ರಾಜಕುಮಾರ್, ಕಲ್ಲಂಡೂರು ಲೋಕೇಶ್, ಜಿ.ಕೆ.ಲೋಕೇಶ್, ರಾಮಕೃಷ್ಣ, ಶಿವಣ್ಣ, ಮಂಜುನಾಥ್, ಬಿಸಪ್ಪಗೌಡ, ಮನ್ಮಥರೆಡ್ಡಿ, ಎನ್.ವೆಂಕಟೇಶ್, ಎ.ಎಲ್.ಲಕ್ಷ್ಮೀನಾರಾಯಣ, ಟಿ.ಅಮರೇಂದ್ರ, ಟಿ.ಆರ್.ಜಯರಾಮ್, ಆದರ್ಶ, ಮುನಿಯಪ್ಪ, ಬಿ.ಎನ್.ನಾರಾಯಣಗೌಡ, ವೆಂಕಟೇಶ್ ಸೇರಿದಂತೆ ಇನ್ನು ಅನೇಕ ಹಿರಿಯ ಮತ್ತು ಕಿರಿಯ ನೂರಾರು ವಕೀಲರುಗಳು ಉಪಸ್ಥಿತರಿದ್ದರು.