ವಕೀಲರ ಸಂಘದಿಂದ ನೀರಿನ ಅರವಟಿಗೆ ಆರಂಭ

ಸಂಜೆವಾಣಿ ವಾರ್ತೆ
ಮಾನ್ವಿಮಾ.೩೦- ಸಿವೀಲ್ ಮತ್ತು ಜೆ.ಎಂ.ಸಿ. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಬೇಸಿಗೆ ಅಂಗವಾಗಿ ಸಾರ್ವಜನಿಕರಿಗೆ ಶುದ್ದವಾಶದ ಕುಡಿಯುವ ನೀರನ್ನು ಒದಗಿಸುವ ಅರವಟಿಗೆಯನ್ನು ನ್ಯಾಯಾಧೀಶರಾದ ಆಶಪ್ಪ ಬಿ.ಸಣ್ಣಮನಿರವರು ಮಜ್ಜಿಗೆಯನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಕಲ್ಯಾಣ ಕನಾಟಕ ಬಾಗದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ವಕೀಲರ ಸಂಘದ ವತಿಯಿಂದ ಸಾರ್ವಜನಿಕರಿಗಾಗಿ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಿವರಾಜ ವಿ.ಸಿದ್ದೇಶ್ವರ, ಸಹಾಯಕ ಸರಕಾರಿ ಅಭಿಯೋಜಕರಾದ ಅರ್ಚನಾ ಹನುಮೇಶ ಯಾದವ್, ವಕೀಲರ ಸಂಘದ ಅಧ್ಯಕ್ಷರಾದ ರವಿಕುಮಾರ ಪಾಟೀಲ್,ಉಪಾಧ್ಯಕ್ಷರಾದ ಮನೋಹರ್ ವಿಶ್ವಕರ್ಮ, ಹಿರಿಯ ವಕೀಲರಾದ ಎ.ಬಿ.ಉಪಳಮಠ, ಮಲ್ಲಿಕಾರ್ಜುನ ಪಾಟೀಲ್, ಗುಮ್ಮ ಬಸವರಾಜ, ಬಿ.ಕೆ.ಅಮರೇಶಪ್ಪ.ಶೇಖರಪ್ಪ ವಕೀಲರು, ಸೇರಿದಂತೆ ಇನ್ನಿತರರು ಇದ್ದರು.