ವಕೀಲರ ಸಂಘದಿಂದ ಕ್ರೀಡಾಕೂಟ ಆಯೋಜನೆ 

ಸಂಜೆವಾಣಿ ವಾರ್ತೆಹರಿಹರ ಅ.೩೦;  ವಕೀಲರ ಸಂಘದ ಸಹಯೋಗದಲ್ಲಿ   ಅಂತರ್ಜಿಲ್ಲಾ ಮಟ್ಟದ ಕ್ರಿಕೆಟ್ ಕ್ರೀಡಾ ಕೂಟವನ್ನು ಮಹಾತ್ಮ ಗಾಂಧಿ  ಕ್ರೀಡಾಂಗಣದಲ್ಲಿ  ಏರ್ಪಡಿಸಿದ್ದು,  ಕ್ರೀಡಾಕೂಟವನ್ನು ಹರಿಹರದ ಪ್ರಧಾನ ಸಿವಿಲ್ ಜಡ್ಜ್  ಮತ್ತು ಜೆ.  ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮಹದೇವ್ ಕಾನಟ್ಟಿ ಇ ಉದ್ಘಾಟಿಸಿದರು.ಕ್ರೀಡಾಕೂಟದಲ್ಲಿ ಹಾವೇರಿ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಂದ ವಿವಿಧ ತಾಲ್ಲೂಕುಗಳ ವಕೀಲರ ಸಂಘಗಳ ತಂಡಗಳು ಭಾಗವಹಿಸಿರುತ್ತವೆ. ಈ ಸಂದರ್ಭದಲ್ಲಿ ಹರಿಹರ ವಕೀಲರ ಸಂಘದ ಸದಸ್ಯರಾದಂತಹ ಬಿ.ಹಾಲಪ್ಪ, ನಾಗರಾಜ್ ಬಿ., ನಾಗರಾಜ್ ಹಲವಾಗಲು, ಅಧ್ಯಕ್ಷರಾದ ರುದ್ರಗೌಡ ಪಿ., ಕಾರ್ಯದರ್ಶಿ ಗಣೇಶ್ ಕೆ. ದುರ್ಗದ,  ಉಪಾಧ್ಯಕ್ಷೆ ಸಾಕಮ್ಮ.ಸಹಕಾರ್ಯದರ್ಶಿ ಬಾಲಾಜಿ ಸಿಂಗ್ ಮತ್ತು ಇತರೆ ಪದಾಧಿಕಾರಿಗಳು  ಮತ್ತು ಸದಸ್ಯರು ಹಾಜರಿದ್ದರು.