ವಕೀಲರ ಸಂಘದಿಂದ ಕಾನೂನು ಕಾರ್ಯಾಗರ
ವಕೀಲರ ಸಂರಕ್ಷಣೆ ಕಾಯ್ದೆ ಮಂಡನೆ:ವಿಶಾಲ್ ರಘು

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.26: ರಾಜ್ಯ ವಕೀಲರ ಪರಿಷತ್,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬಳ್ಳಾರಿ ವಕೀಲರ ಸಂಘದಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಸಭಾಂಗಣದಲ್ಲಿ ಮೂರುದಿನಗಳ ಕಾನೂನು
ಕಾರ್ಯಗಾರ ಫೆ 24 ರಿಂದ ನಡೆಯುತ್ತಿದೆ.
ವಕೀಲರಿಗೆ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಈ  ಕಾನೂನು ಕಾರ್ಯಗಾರವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಹೆಚ್.ಎಂ, ಉದ್ಘಾಟಿಸಿ.
ಕರ್ನಾಟಕ ವಿಧಾನಸಭೆಯಲ್ಲಿ ವಕೀಲರ ಸಂರಕ್ಷಣೆ ಕಾಯ್ದೆ ಮಂಡನೆ ಆಗಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸಿ, ಇದು  ಎಲ್ಲಾ ವಕೀಲರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯ ಎಂದರು.
ವಕೀಲರ ವೆಲ್ ಫೇರ್  ನಿಧಿ 8 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡುವ ಪ್ರಸ್ತಾವನೆ ಇದೆ, ಕರ್ನಾಟಕ ರಾಜ್ಯ ವಕೀಲ ಪರಿಷತ್‌ ಮತ್ತು ಜಿಲ್ಲೆ ಮತ್ತು ಜಿಲ್ಲೆಯ ಆಯಾ ತಾಲ್ಲೂಕಿನ ವಕೀಲರ ಸಂಘ ಸಹಯೋಗದಿಂದ ಇಂತಹ ಕಾನೂನು ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದರಿಂದ ನಮ್ಮ ವಕೀಲರಿಗೆ ಕಾನೂನಿನ ಅರಿವು  ಹೆಚ್ಚಿಸಲು ಸಾಧ್ಯವಾಗಿ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಕಕ್ಷಿದಾರರಿಗೆ ನ್ಯಾಯ ಒದಗಿಸಲು ಅನುಕೂಲವಾಗಲಿದೆ ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಧೀಶೆ ಎಸ್.ಹೆಚ್. ಪುಷ್ಪಾಂಜಲಿ ದೇವಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಉಡೇದ ಬಸವರಾಜ,  ಸದಸ್ಯರಾದ  ಎ.ವಿ. ಮಗದುಮ್,  ಎಸ್‌. ಹರೀಶ್, ಎಂ.ಎನ್. ಮಧುಸೂಧನ್,  ಕೆ. ಕೋಟೆಶ್ವರಾವ್‌, ಹಾಗೂ ಬಳ್ಳಾರಿ ವಕೀಲರ ಸಂಘದ ಕಾರ್ಯದರ್ಶಿ ಬಿ. ರವೀಂದ್ರನಾಥ್, ಅಧ್ಯಕ್ಷ ಎರ್ರೆಗೌಡ, ಉಪಾಧ್ಯಕ್ಷ ನಾಗರಾಜ ನಾಯಕ, ಜಂಟಿ ಕಾರ್ಯದರ್ಶಿ  ತ್ರಿವೇಣಿ ಪತ್ತಾರ್, ಖಜಾಂಚಿ  ಕೆ. ಎನ್. ಈರೇಶ್‌, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ವಕೀಲರ ಸಂಘ ಎಲ್ಲಾ ಹಿರಿಯ, ಕಿರಿಯ, ಹಾಗೂ ಮಹಿಳಾ ನ್ಯಾಯ ವಾದಿಗಳು ಹಾಗೂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು  ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ  ವಕೀಲರ ವೃತ್ತಿ ರೀತಿ ಸಂಹಿತೆ, ಭಾರತೀಯ ಸಾಕ್ಷ ಅಧಿನಿಯಮ, ನಿರ್ಧಿಷ್ಟ ಪರಿಹಾರಗಳ ಅಧಿನಿಯಮ, ಅಪರಾಧಿಕ ನ್ಯಾಯ
ವಿಚಾರಣೆಯಲ್ಲಿ ಪೋಲೀಸ್ ಕೈಪಿಡಿ ಹಾಗೂ ವೈದ್ಯಕೀಯ  ನ್ಯಾಯ ಶಾಸ್ತ್ರದ ಪ್ರಾಮುಖ್ಯತೆ,  ಭಾರತೀಯ ದಂಡ ಸಂಹಿತೆ, ದಿವಾಣಿ ಪ್ರಕ್ರೀಯಾ ಸಂಹಿತೆ  ವಿಷಯಗಳ ಕುರಿತು ಕಾನೂನು  ಪರಿಣಿತರು ಹಾಗೂ ಹಿರಿಯ ವಕೀಲರಿಂದ ಆರು ಗೋಷ್ಟಿಗಳು ನಡೆದವು.
ಬಳ್ಳಾರಿ: ರಾಜ್ಯ ವಕೀಲರ ಪರಿಷತ್,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬಳ್ಳಾರಿ ವಕೀಲರ ಸಂಘದಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಸಭಾಂಗಣದಲ್ಲಿ ಮೂರುದಿನಗಳ ಕಾನೂನು
ಕಾರ್ಯಗಾರ ಫೆ 24 ರಿಂದ ನಡೆಯುತ್ತಿದೆ.
ವಕೀಲರಿಗೆ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಈ  ಕಾನೂನು ಕಾರ್ಯಗಾರವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಹೆಚ್.ಎಂ, ಉದ್ಘಾಟಿಸಿ. ಕರ್ನಾಟಕ ವಿಧಾನಸಭೆಯಲ್ಲಿ ವಕೀಲರ ಸಂರಕ್ಷಣೆ ಕಾಯ್ದೆ ಮಂಡನೆ ಆಗಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸಿ, ಇದು  ಎಲ್ಲಾ ವಕೀಲರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯ ಎಂದರು.