ಕಲಬುರಗಿ,ಜು 4: ಗುಲ್ಬರ್ಗಾ ವಕೀಲರ ಸಂಘದ ಹಳೆ ಕಟ್ಟಡದ ಸಭಾಂಗಣದಲ್ಲಿ ಡಾ. ಫ. ಗು.ಹಳಕಟ್ಟಿ ಯವರ 143 ನೇ ಜನ್ಮದಿನದ ಅಂಗವಾಗಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಆಚರಿಸಲಾಯಿತು. ಕಾರ್ಯದರ್ಶಿ ಬಸಲಿಂಗ ನಾಸಿ ಸ್ವಾಗತಿಸಿದರು. ನ್ಯಾಯವಾದಿ ಜೇನವೆರಿ ವಿನೋದಕುಮಾರ ಮಾತಾನಾಡುತ್ತ, ತಮ್ಮ 41 ನೇ ವಯಸ್ಸಿನಲ್ಲಿ ವಕೀಲ ವೃತ್ತಿ ಜೊತೆಗೆ 1921 ರಲ್ಲಿಯೇ ಬಸವೇಶ್ವರರ ವಚನ ಸಾಹಿತ್ಯ ವನ್ನು ಇಂಗ್ಲಿಷ್ ನಲ್ಲಿ ಅನುವಾದಗೊಳಿಸಿ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಮಾಡಿದ್ದು, ಯಾರು ಮರೆಯುವಂತಿಲ್ಲ ಅವರ ಸೇವೆ ಶ್ಲಾಘನೀಯವಾದದ್ದುಎಂದರು . ಹಿರಿಯ ವಕೀಲ ಜಿ.ಎಸ್.ಬಿರಾದಾರ , ನ್ಯಾಯವಾದಿ ಶಿವಕುಮಾರ ಬಿದರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಜಂಟಿ ಕಾರ್ಯದರ್ಶಿ ಚಿಕ್ಕಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಚಂದ್ರಶೇಖರ ದಾಸನಕೇರಿ, ಎಸ್.ಎಸ್.ಮಠಪತಿ, ಲಕ್ಷ್ಮಿಕಾಂತ ವಾಘೆ, ದೌಲತರಾವ ಮಾಲಿ ಪಾಟೀಲ, ಬಸವರಾಜ ಅಗ್ಗಿ, ದತ್ತಾತ್ರೇಯ ಕುಲಕರ್ಣಿ, ಪಿ. ಎನ.ಕಪನೂರ್, ಶೈಲೇಶ ಜಮದಾರ, ಆನಂದ ರೆಡ್ಡಿ, ಸಿದ್ದಲಿಂಗ ಮಡಿವಾಳ, ಚಂದ್ರಕಾಂತ ಪೂಜಾರಿ, ಗುರುಸ್ವಾಮಿ ಸಂಕಿನಮಠ, ರಾಜಗೋಪಾಲ ಭಂಡಾರಿ, ಸಿದ್ಧಾರೂಢ ಧನ್ನಾ, ಮೋಹನ ಚಾರ್ಮಾ,ಜಯಶ್ರೀ, ಸಿದ್ಧಮ್ಮ, ಸುಜಾತಾ ಅಕ್ಕಾ ಸಇತರರು ಉಪಸ್ಥಿತರಿದ್ದರು.