ವಕೀಲರ ಮೇಲೆ ಮನಬಂದಂತೆ ಥಳಿತ; ವಕೀಲರಿಂದ ಡಿಸಿಗೆ ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಡಿ.3;: ವಕೀಲ ಪ್ರೀತಮ್ ಮೇಲೆ ಮನ ಬಂದಂತೆ ಥಳಿಸಿರುವ ಚಿಕ್ಕಮಗಳೂರು ಪೆÇೀಲಿಸ್ ಇಲಾಖೆಯ ಪಿಎಸ್‍ಐ ಹಾಗೂ ಸಿಬ್ಬಂದಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.ನವೆಂಬರ್ 30ರಂದು ಸಂಜೆ 6ರ ಸುಮಾರಿಗೆ ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಮೇಲೆ ಸ್ಥಳೀಯ ಪಿಎಸ್‍ಐ ಮಹೇಶ್ ಪೂಜಾರಿ ಹಾಗೂ ಇತರೆ 6 ಸಿಬ್ಬಂಧಿಗಳು ಮನ ಬಂಧಂತೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಎಲ್ಲಾ ಸರ್ವ ಸದಸ್ಯರು ಖಂಡಿಸುತ್ತದೆ ಎಂದು ವಕೀಲರ ಸಂಘವು ಹೇಳಿದೆ.ವಿನಾಕಾರಣ ವಕೀಲರ ಮೇಲೆ ಮನಬಂದಂತೆ ಥಳಿಸಿರುವ ಆಪಾಧಿತರ ಮೇಲೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಅಲ್ಲದೇ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಸರ್ವ ಸದಸ್ಯರು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದರು.ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಮಂಜುನಾಥ್, ವಕೀಲರಾದ ಎಂ.ಎನ್.ಆಂಜನೇಯ, ಸಿ.ಎಂ.ಚನ್ನಕೇಶವ, ಎಸ್.ಪರಮೇಶ್, ಬಿ.ಎಸ್.ಲಿಂಗರಾಜ್, ಎಂ.ಜಿ.ರಮೇಶ್, ಬಿ.ಎಂ.ಹನುಮಂತಪ್ಪ, ಎ.ಎಲ್.ಹಾಲೇಶ್, ಎಂ.ಶಂಕರ್‍ರಾವ್, ಅಣ್ಣಪ್ಪ, ಹೆಚ್.ಎಸ್.ಯೋಗೇಶ್, ಹೆಚ್.ದಿವಾಕರ್, ಶಿವಕುಮಾರ್, ನೀಲಕಂಠಯ್ಯ, ನಾಗರಜ್, ಮಲ್ಲಿಕಾರ್ಜುನ ಗುಮ್ಮನೂರು, ಅಂದನೂರು ಶಿವಕುಮಾರ್, ಎಲ್.ಶ್ಯಾಮ್, ಟಿ.ಎಸ್.ಗಿರೀಶ್, ತಾರೇಶ್ ಇತರರು ಇದ್ದರು.