ವಕೀಲರ ದಿನಾಚರಣೆ

ಕಲಬುರಗಿ:ಡಿ.6:ಭಾರತೀಯ ಜನತಾ ಪಾರ್ಟಿ ಕಲಬುರಗಿ ಮಹಾನಗರ ಜಿಲ್ಲಾ ಕಾನೂನು ಪ್ರಕೋಷ್ಟ ಕಲಬುರಗಿ ವತಿಯಿಂದ ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ|| ಬಾಬು ರಾಜೇಂದ್ರ ಪ್ರಸಾದ ಅವರ ಜನ್ಮ ದಿನಾಚರಣೆಯನ್ನು ವಕೀಲರ ದಿನಾಚರಣೆಯಾಗಿ ಆಚರಣೆ ಮಾಡುತ್ತಿದ್ದು, ಆದ್ದರಿಂದ ದಿ.03.12.2021 ರಂದು ಕಲಬುರಗಿ ನಗರದ ಭಾರತೀಯ ಜನತಾಪಾರ್ಟಿಯ ಆಫೀಸನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಶರಣಬಸಪ್ಪಾ ಕಾಡಾದಿ ಮಾಜಿ. ರಾಜ್ಯ ಸಹ ಸಂಚಾಲಕರು ಉದ್ಘಾಟಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಶೇಖರ ಬಿ.ಆರ್ ಡೊಂಗರಗಾಂವ ಮಹಾನಗರ ಜಿಲ್ಲಾ ಸಂಚಾಲಕರು ಮಾತನಾಡುತ್ತಾ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತನ್ನ ಬಜೆಟಿನಲ್ಲಿ ಶೇ 1% ಹಣ ಮೀಸಲಿಟ್ಟು ವಕೀಲರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕು ಮತ್ತು ವಕೀಲರ ದಿನಾಚರಣೆಯನ್ನು ಸರಕಾರದಿಂದಲೇ ಆಚರಣೆ ಜಾರಿಗೆ ಬರಬೇಕೆಂದರು. ಮುಖ್ಯ ಅತಿಥಿಗಳಾಗಿ ಮಹಾದೇವ ಬೆಳಮಗಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶೀಗಳು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಿಗೂ ಮತ್ತು ಪಕ್ಷಾತೀತವಾಗಿ ಹಿರಿಯ ವಕೀಲರ ಸೇವೆಯನ್ನು ಮನಗಂಡು ಅವರನ್ನು ಸನ್ಮಾನಿಸಲಾಯಿತ್ತು. ಸಿ.ವಿ.ಮಾಲೀ ಪಾಟೀಲ್, ಜಿ.ಎಸ್.ಬಾರಾದಾರ್, ಸುಭಾಷ ಕೋಣಿ, ಎಮ್.ಎಮ್.ಪಾಟೀಲ್, ಬಸವರಾಜ ಚಿಂಚೋಳಿ. ಮೀರಾ ಚೌಡಾಪೂರಕರ್, ಬಿ. ಆರ್ ಪಾಟೀಲ್, ಡಿ.ಎಸ್.ನಾಮ್ದಾರ್, ಆರತಿ ತಿವಾರಿ, ನ್ಯಾಯವಾದಿಗಳನ್ನು ಸನ್ಮಾನಿಸಲಾಯಿತ್ತು.

ಕಾರ್ಯಕ್ರಮದಲ್ಲಿ ಅಂಬಾರಾಯ ಪಟ್ಟಣಕರ್ ಸಂಚಾಲಕರು, ಮಹಾಬಲ್ಲೇಶ್ವರ ಸಹ ಸಂಚಾಲಕರು, ದತ್ತು ಪಾಟೀಲ್ ಮರತೂರ್, ಸಂಗಮೇಶ ದೊಡ್ಡಮನಿ, ಮಲ್ಲಿನಾಥ ಬಾಳಿ, ಕಲ್ಯಾಣಪ್ಪ ವಗ್ದರ್ಗಿ, ಮಲ್ಲಿಕಾರ್ಜುನ ಬರೋಡೆ, ಸಂಗೀತಾ ಸ್ವಾಮಿ, ಶ್ರೀದೇವಿ ಇತರ ನ್ಯಾಯಾವಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಅಂಬಾರಾಯ ಪಟ್ಟಣಕರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.