ವಕೀಲರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ, ಅನ್ನ ಸಂತರ್ಪಣೆ ಕಾರ್ಯಕ್ರಮ

ಮಾನ್ವಿ.ಡಿ.೦೩-ಪಟ್ಟಣದ ಕೋರ್ಟ್ ಆವರಣದಲ್ಲಿ ಮಾನ್ವಿ ವಕೀಲರ ಸಂಘದಿಂದ ವಕೀಲರ ದಿನಾಚರಣೆ ಅಂಗವಾಗಿ ರಕ್ತದಾನ ಹಾಗೂ ಸುಮಾರು ೨೦೦೦ ಜನರಿಗೆ ಅನ್ನ ಸಂತರ್ಪಣೆಯ ಕಾರ್ಯಕ್ರಮವನ್ನು ಹಿರಿಯ ನ್ಯಾಯದೀಶರಾದ ದೀಪಾಗೋಪಾಲ ಮಾನೆರ್ ಕರ್ ಅವರು ಚಾಲನೆ ನೀಡಿದರು.
ಪಟ್ಟಣದ ಕೋರ್ಟ್ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಸುಮಾರು ೩೦ ಕ್ಕೂ ಅಧಿಕ ವಕೀಲರು ರಕ್ತದಾನ ಮಾಡಿದರು, ರಾಯಚೂರು ವೈದ್ಯಕೀಯ ಜ್ಞಾನಗಳ ಸಂಸ್ಥೆ ಭೋಧರ ಆಸ್ಪತ್ರೆ ರೀಮ್ಸ್ ರಕ್ತನಿಧಿ ಕೇಂದ್ರಕ್ಕೆ ರಕ್ತವನ್ನು ನೀಡಲಾಯಿತು.
ಮಧ್ಯಾಹ್ನದ ನಂತರ ವಕೀಲರ ಸಂಘದಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು ಸಂಜೆಯ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರನ್ನು ಸನ್ಮಾನಮಾಡಿ ಗೌರವಿಸಲಾಗುತ್ತದೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಕೀಲರಿಗೆ ನೆನಪಿನ ಕಾಣಿಕೆ ಮತ್ತು ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ ಎಂದು ಹಿರಿಯ ವಕೀಲರಾದ ಗುಮ್ಮಾ ಬಸವರಾಜ ಅವರು ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯದೀಶರಾದ ವಿಜಯಕುಮಾರ್ ಎಸ್ ಹಿರೇಮಠ, ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ, ಸರ್ಕಾರಿ ಅಭಿಯೋಜಕರಾದ ಅರ್ಚನಾ ಹನುಮೇಶ, ಶೇಖರಪ್ಪ ಪಾಟೀಲ,ಬಿ ಚನ್ನನಗೌಡ, ಅಯ್ಯಪ್ಪ ನಾಯಕ, ಬಿಕೆ ಅಮರೇಶಪ್ಪ, ಎ ಬಿ ಉಪ್ಪಳಮಠ, ಸಿದ್ದಲಿಂಗಪ್ಪ, ತನ್ವೀರ್ ಉಲ್ಲ ಹಸ್ಸನ್, ವೀರನಗೌಡ ಪೋತ್ನಾಳ, ಕಾರ್ಯದರ್ಶಿ ರವಿಕುಮಾರ ಪಾಟೀಲ, ಚಂದ್ರಶೇಖರ ಮದ್ಲಾಪೂರು, ಉರುಕುಂದ ಜಗ್ಲಿ, ಮಾಳಿಂಗರಾಯ, ಯಲ್ಲಪ್ಪ ನಾಯಕ, ಚಂದ್ರಕಲಾ, ಸಮ್ದಾನಿ ಸಿದ್ದಕಿ, ಸಿದ್ದಪ್ಪ ಬ್ಯಾಗವಾಟ, ಮಲ್ಲಿಕಾರ್ಜುನ ಮೇಟಿ, ಶ್ರೀನಿವಾಸ ನಂದಿಹಾಳ, ಮಾನವಿ ಆರೋಗ್ಯ ಸಿಬ್ಬಂದಿಗಳಾದ ಮಹಮ್ಮದ್ ಬೇಗಂ, ಶ್ರೀದೇವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.