ವಕೀಲರ ಅನುಚಿತ ವರ್ತನೆ ಸುಪ್ರೀಂ ಅಸಮಾಧಾನ

ನವದೆಹಲಿ ,ಅ.೨೭- ಅಂಗಿ ಧರಿಸದೆ ವಿಚಾರಣೆಗೆ ಹಾಜರಾದ ವಕೀಲರ ನಡೆಯ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅತೃಪ್ತಿ ಅಸಮಾಧಾನ ವ್ಯಕ್ತಪಡಿಸಿ, ಇದು ಕ್ಷಮಿಸಲಾರದ ಸಂಗತಿ ಎಂದು ಹೇಳಿದೆ.

ಸುದರ್ಶನ್ ಟಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕ ವಿಚಾರಣೆಗೆ ಹಾಜರಾದ ವಕೀಲರೊಬ್ಬರು ಅಂಗಿ ಧರಿಸಿರಲಿಲ್ಲ.ಮತ್ತೊಬ್ಬರು ಸಿಗರೇಟ್ ಸೇದುತ್ತಾ ಕಲಾಪದಲ್ಲಿ ಪಾಲ್ಗೊಂಡಿದ್ದರು. ಇದನ್ನು ಗಮನಿಸಿ? ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ಇಂದು ಮಲ್ಹೋತ್ರ, ಅವರಿದ್ದ ನ್ಯಾಯಪೀಠ ವಕೀಲರ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದೆ.

ನ್ಯಾಯಾಲಯದ ಕಲಾಪಕ್ಕೆ ಅಂಗಿಯಿಲ್ಲದೆ ಆನ್ ಲೈನ್ ಮೂಲಕ ಹಾಜರಾದ ವಕೀಲರ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ವಕೀಲರ ನಡೆಯನ್ನ ಸಹಿಸಲು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಬ್ಬ ನ್ಯಾಯಮೂರ್ತಿ ಇಂದು ಮಲ್ಹೊತ್ರ, ವಕೀಲರ ಈ ನಡೆ ಕ್ಷಮಿಸಲು ಅಸಾಧ್ಯವಾದುದು ಎಂದು ತೀವ್ರ ಅತೃಪ್ತಿ ಹೊರಹಾಕಿದ್ದಾರೆ.

ಸುಪ್ರೀಂ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಸುದರ್ಶನ್ ಟಿವಿ ಪ್ರಕರಣವನ್ನು ಆನ್‌ಲೈನ್ ಮೂಲಕ ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಈ ವೇಳೆ ರಾಜಸ್ತಾನ ಹೈಕೋರ್ಟ್ ನ ವಕೀಲರೊಬ್ಬರು ಅಂಗಿಯಿಲ್ಲದೆ ಆನ್ಲೈನ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗದರು.

ಮತ್ತೊಬ್ಬ ವಕೀಲ ರಾಜೀವ್ ಧವನ್ ಅವರು ಆನ್-ಲೈನ್ ವಿಚಾರಣೆ ವೇಳೆ ಸಿಗರೇಟ್ ಸೇರುತ್ತಿದ್ದು ಇದನ್ನು ಗಮನಿಸಿದ ನ್ಯಾಯಾಧೀಶರು ಇಬ್ಬರು ವಕೀಲರ ನಡುವಿನ ಸ್ಥಿರವಾಗಿ ಆಕ್ಷೇಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ಮುಂದೂಡಿಕೆ:

ಒಬ್ಬ ವಕೀಲರು ಅಂಗಿಯಿಲ್ಲದೆ ಆನ್‌ಲೈನ್ ಮೂಲಕ ಕಲಾಪಕ್ಕೆ ಹಾಜರಾದರು ಮತ್ತು ಮತ್ತೊಬ್ಬ ವಕೀಲ ಆನ್ ಲೈನ್‌ನಲ್ಲಿ ಸಿಗರೇಟ್ ಸೇದುತ್ತಾ ಕಲಾಪದಲ್ಲಿ ಭಾಗಿಯಾಗಿದ್ದ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಇಬ್ಬರು ನ್ಯಾಯಾಧೀಶರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಅಂಗಿಯಿಲ್ಲದೆ ಕಲಾಪಕ್ಕೆ ಹಾಜರಾಗಿದ್ದಾರೆ ನನಗೆ ಸೂಕ್ತ ಯೂನಿಫಾರಂ ಧರಿಸಿ ಕಲಾಪಕ್ಕೆ ಭಾಗಿಯಾಗಿ ಅಲ್ಲಿಯತನಕ ಕಲಾಪವನ್ನು ಮುಂದೂಡಲಾಗಿದೆ ಸುಪ್ರೀಂಕೋರ್ಟ್ ಹೇಳಿದೆ.

ವಕೀಲರ ಕಾಯ್ದೆಯ ಪ್ರಕಾರ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಭಾಗಿಯಾದ ಬೇಕಾದ ವಕೀಲರು ಸೂಕ್ತ ಡ್ರೆಸ್ ಕೋಡ್ ಧರಿಸಬೇಕು ಎನ್ನುವ ಕಡ್ಡಾಯ ಮಾರ್ಗಸೂಚಿ ಇದೆ ಅದನ್ನು ವಕೀಲರು ನಿರ್ಲಕ್ಷ್ಯ ಮಾಡಿದ್ದಾರೆ. ನ್ಯಾಯಾಲಯದ ಬಗ್ಗೆ ವಕೀಲರ ಈ ರೀತಿಯ ವರ್ತನೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರ ನ್ಯಾಯಪೀಠ ಹೇಳಿದೆ.

೧೦ ಸಾವಿರ ದಂಡ:

ಆನ್‌ಲೈನ್ ವಿಚಾರಣೆಯ ಸಮಯದಲ್ಲಿ ಸಿಗರೇಟ್ ಸೇದುತ್ತಿದ್ದ ವಕೀಲನಿಗೆ ಗುಜರಾತ್ ಹೈಕೋರ್ಟ್ ಹತ್ತು ಸಾವಿರ ರುಪಾಯಿ ದಂಡ ವಿಧಿಸಿದೆ