ವಕೀಲರು ತಮ್ಮ ಸೇವೆಯ ಜೊತೆಗೆ ಸಮಾಜಮುಖಿ ಕೆಲಸ ಮಾಡಿ – ಸೋಮಶೇಖರಪ್ಪ

ರಾಯಚೂರು, ಸೆ.೨೩- ವಕೀಲರು ನ್ಯಾಲಯದಲ್ಲಿ ವಕಾಲತ್ತು ನಡೆಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮುನ್ನೂರುವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸೋಮಶೇಖರಪ್ಪ ಹೊಕ್ರಾಣಿ ಸಲಹೆ ನೀಡಿದರು.
ನಗರದ ಸೇಠ್ ಚುನಿಲಾಲ್ ಅಮರಚಂದ್ ಬೊಹರಾ( ಎಸ್ ಸಿಎಬಿ) ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕೀಲರ ವೃತ್ತಿ ಪವಿತ್ರವಾದುದು. ಸಂವಿಧಾನದ ಚಿಕ್ಕ ಕಲಂ ಕೂಡ ದೊಡ್ಡ ಕಾನೂನು ರಚನೆಗೆ ಪರಿಣಾಮ ಬೀರುತ್ತದೆ. ಕಾನೂನು ವಿದ್ಯಾರ್ಥಿಗಳು ಇದನ್ನು ಅರಿತು ಸಮಾಜಮುಖಿ ಕೆಲಸಕ್ಕೆ ಮುಂದಾಗಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ, ಮೌಢ್ಯಾಚಾರ, ಜಾತಿಯತೆ ಸೇರಿ ಅನೇಕ ಜ್ವಲಂತ ಸಮಸ್ಯೆ ಜೀವಂತವಾಗಿದ್ದು ಇವುಗಳ ನಿವಾರಿಣೆಗೆ ಜಾಗೃತಿ ಮೂಡಿಸಿ ಕಾನುನುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಸತತ ಅಧ್ಯಾಯನ, ಪ್ರಯತ್ನದಿಂದ ಗುರಿ ಸಾಧಿಸಬಹುದು. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವೃತ್ತಿಯಲ್ಲಿ ಭಿನ್ನವಾಗಿ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಯಾರೇ ಆದರೂ ಸಂಶೋದನಾಗು, ಶಿಕ್ಷಣ ಸಂಘಟನೆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ನನ್ನ ದೈಹಿಕನ್ಯೂನತೆಗಳ ಬಗ್ಗೆ ಕೀಳರಿಮೆ ಪಡೆಯದೇ ಮೆಟ್ಟಿ ನಿಂತು ಸಾಧನೆ ಮಾಡಿದ್ದೇನೆ ಎಂದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಂದಾಪುರ ಶ್ರೀನಿವಾಸ ಅವರು ಮಾತನಾಡಿ, ಕಾನೂನು ಕ್ಷೇತ್ರಗಳಲ್ಲಿ ವಿಫುಲ ಅವಕಾಶವಿದ್ದು ತಂತ್ರಜ್ಞಾನ ಬಳಸಿಕೊಂಡು ಮುಂದೆ ಬರಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್ ಸಿ ಎಬಿ ಆಡಳಿತ ಮಂಡಳಿಯ ಅಧ್ಯಕ್ಷ ವೈ ಶ್ರೀಕಾಂತ್ ರಾವ್ ಮಾತನಾಡಿ, ಕಾನೂನು ಕ್ಷೇತ್ರದಲ್ಲಿ ಯುವ ವಕೀಲರು ಆರಂಭದ ದಿನಗಳಲ್ಲಿ ಹೆಚ್ಚು ಶ್ರಮ ಹಾಕಬೇಕು. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಕಾನೂನು ಕ್ಷೇತ್ರದ ಆಗುಹೋಗು ಪ್ರಚಲಿತ ವಿದ್ಯಾಮಾನಗಳನ್ನು ತಿಳಿದುಕೊಂಡಾಗ ಮಾತ್ರ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಸ ಪ್ರಶ್ನೆ, ಪ್ರಬಂಧ,ಕ್ರಿಕೆಟ್ ಸೇರಿ ವಿವಿಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಸುಂದರ ಪಾಟೀಲ್ ಅವರು ಅತಿಥಿ ಪರಿಚಯ ಮಾಡಿದರು.ಈ ಸಂದರ್ಭದಲ್ಲಿ ಎಸ್ ಸಿಎಬಿ ಕಾಲೇಜಿನ ಆಡಳಿತ ಸದಸ್ಯರಾದ ಅಬ್ದುಲ್ ಕರೀಂ, ದ್ಯಾಸನೂರು ಮೃತ್ಯುಂಜಯ, ಜತನ್ ರಾಜ್ ಬೊಹರಾ, ಪ್ರಸನ್ನ ರಾಜ್ ಬೊಹರಾ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ವಿದ್ಯಾರ್ಥಿನಿ ಸಂಗೀತ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಸುನಿಲ್ ಕುಮಾರ ಭಂಡಾರಿ ಸ್ವಾಗತಿಸಿದರು. ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಪ್ರಭು ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯೆ ಪದ್ಮಾ ಜೆ ವಂದಿಸಿದರು.