ವಕೀಲರಿಗೆ ನೆರವು ನೀಡಲು ಮನವಿ

ದಾವಣಗೆರೆ. ಜೂ.೧:  ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ವಕೀಲ ಸಮುದಾಯಕ್ಕೆ ನೆರವು ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವಕೀಲರುಮನವಿ ಸಲ್ಲಿಸಿದರು.ಕೊರೊನದ ಭೀಕರತೆಯಿಂದ ಆರಂಭವಾದ ಲಾಕ್ಡೌನ್ ನಮ್ಮ ವಕೀಲ ಸಮುದಾಯದ ಬದುಕನ್ನೆ ನಾಶಮಾಡಿದೆ. ಲಾಕ್ಡೌನ್ನಿಂದಾಗಿ ಕಕ್ಷಿದಾರರು ಮತ್ತು ವಕೀಲರ ಕೊಂಡಿಯೇ ಕಳಚಿಹೊಗಿದೆ. ವಕೀಲ ವೃತ್ತಿಯ ಬದುಕು ಇರುವುದೇ ಕಕ್ಷಿದಾರರೊಂದಿಗೆ. ಇದನ್ನು ಹೊರತುಪಡಿಸಿ ಸರ‍್ಕಾರದಿಂದಾಗಲಿ ಅಥವಾ ಇನ್ಯಾವುದೆ ಸಂಸ್ಥೆಯಿಂದ ಸಂಬಳವಾಗಲಿ ಬೇರೆ ಸವಲತ್ತಾಗಲಿ ಇರುವುದಿಲ್ಲಾ.  ಆದ್ದರಿಂದ ಲಾಕ್ಡೌನ್ ಅವಧಿಯಲ್ಲಿ ವೃತ್ತಿಯಲ್ಲಿನ 10 ರ‍್ಷದ ಒಳಗಿನ ವಕೀಲರಿಗೆ ಪ್ರತಿ ತಿಂಗಳಿಗೆ ರೂ. 10,000 ಜೀವನ ನರ‍್ವಹಣೆಗಾಗಿ ಸಹಾಯ ಧನ ನೀಡಬೇಕು. ಕೊರೊನದಿಂದ ಮೃತಪಟ್ಟ ವಕೀಲರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ವಕೀಲರನ್ನುಕೊರೊನ ವಾರಿರ‍್ಸ್‌ ಎಂದು ಪರಿಗಣಿಸಬೇಕು.  ವಕೀಲರು ಕಚೇರಿ ಮತ್ತು ವೃತ್ತಿ ಸಂಬಂಧಿಸಿದಂತೆ ಬ್ಯಾಂಕ್ ಗಳಿಂದ ಪಡೆದ ಸಾಲಗಳನ್ನು ಮನ್ನ ಮಾಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಅನೀಸ್ ಪಾಶ, ಸಿರಾಜುದ್ದೀನ್, ಅಬ್ದುಲ್ ಸಮದ್, ಟಿ.ಬಿ ರುದ್ರೇಶ್ ಎಸ್. ಚಕ್ರವರ್ತಿ ಖಲೀಲ್ ಇದ್ದರು.