ವಕೀಲರಿಗೆ ತಂಪು ಪಾನೀಯ ವಿತರಣೆ

ಕೋಲಾರ,ಮಾ.೨೪: ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ, ಇದರಿಂದ ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಎಪಿಎಂಸಿ ಮಾಜಿ ಅದ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಸಲಹೆ ನೀಡಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಹಿರಿಯ ವಕೀಲ ಬಿಸಪ್ಪಗೌಡರ ನೇತೃತ್ವದಲ್ಲಿ, ವಕೀಲರಿಗೆ ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೆ ತಂಪು ಪಾನೀಯಗಳನ್ನ ವಿತರಿಸಿ ಮಾತನಾಡಿದರು. ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಇದರಿಂದ ಬೀರುವ ದುಷ್ಪರಿಣಾಮ ತಪ್ಪಿಸಿಕೊಳ್ಳಲು ಸಂಬಂಧಪಟ್ಟ ಆರೋಗ್ಯ ಇಲಾಖೆಯವರು ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ವಕೀಲ ಬೀಸಪ್ಪಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನತೆ ಐಷರಾಮಿ ಜೀವನಕ್ಕೆ ಮಾರು ಹೋಗಿ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಇದರಿಂದ ಒಂದಲ್ಲ ಒಂದು ರೀತಿ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಯೋಗಭ್ಯಾಸ, ವ್ಯಾಯಮದಿಂದ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಬದಲಾದ ಆಹಾರ ಪದ್ದತಿ, ಬದಲಾದ ಜೀವನ ಶೈಲಿಯಿಂದಲೂ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಬೀರುತ್ತಿವೆ ಎಂದರು.
ಜನರ ಸೇವೆ ಮಾಡುವ ವಕೀಲರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಸಮಾಜ ಸೇವಕಿ ಕುರ್ಕಿ ರಾಜರಾಜೇಶ್ವರಿ ಅವರು ತಂಪುಪಾನೀಯ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಇತ್ತೀಚಿಗೆ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ರಘುಪತಿಗೌಡ, ವಕೀಲರಾದ ಕೃಷ್ಣೇಗೌಡ, ಆನಂದ್, ಚಲಪತಿ, ನಾಗೇಶ್, ಮಲ್ಲಿಕಾರ್ಜುನ್, ರಾಮಲಿಂಗೇಗೌಡ, ಸಿ.ಬಿ ಜಯರಾಮ್, ಲೋಕೇಶ್, ಮುಖಂಡ ಬಣಕನಹಳ್ಳಿ ನಟರಾಜ್, ಕುರ್ಕಿ ಶ್ರೀಕಾಂತ್ ಹಾಜರಿದ್ದರು.