ವಕೀಲರಿಗೆ ಕೋಟ್ ತಾತ್ಕಾಲಿಕ ಮುಕ್ತಿ

ಬೆಂಗಳೂರು,ಏ.೧೭-
ರಾಜ್ಯಾದ್ಯಂತ ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗುವ ವಕೀಲರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕವಾಗಿ ವಿನಾಯಿತಿ ನೀಡಿದೆ.
ರಾಜ್ಯದಲ್ಲಿ ಬೇಸಿಗೆಯ ಬಿಸಿ ವಕೀಲರನ್ನು ಬಿಟ್ಟಿಲ್ಲ. ರಾಜ್ಯದಲ್ಲಿ ತಾಪಮಾನ ಹೆಚ್ಚಿದ್ದರಿಂದ ಕಪ್ಪು ಕೋಟ್ ಧರಿಸಿದವರಿಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಏ.೫ರಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಿಂದ ಮನವಿ ಮೇರೆಗೆ ಹೈಕೋರ್ಟ್ ವಿನಾಯಿತಿ ನೀಡಿದ್ದು ಏ.೧೮ರಿಂದ ಮೇ ೩೧ರವರೆಗೆ ಬಿಳಿ ಶರ್ಟ್/ಸಲ್ವಾರ್ ಕಮೀಜ್ ಅಥವಾ ಶಾಂತ ಬಣ್ಣದ ದಿರಿಸುಗಳನ್ನು ಧರಿಸಬಹುದೆಮದು ನ್ಯಾಯಾಲಯದ ರಿಜಿಸ್ಟ್ರಾರ್ ಕೆ.ಎಸ್.ಭರತ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.