ವಕೀಲರಿಗೆ ಆಮಿಷ : ಸಿಡಿ ಯುವತಿ ಕಮೀಷನರ್‌ಗೆ ಪತ್ರ

ಬೆಂಗಳೂರು -ಕೊರೊನಾ ಸಂಕಷ್ಟ ಕಾಲದಲ್ಲಿ ಒಂದಷ್ಟು ತಣ್ಣಗಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೆ ಸುದ್ದಿ ಮಾಡಿದ್ದು ಪ್ರಕರಣವನ್ನು ಹಿಂಪಡೆಯಲು ತಮ್ಮ ಪರ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಜಗದೀಶ್‌ಗೆ ಆಮಿಷ ಒಡ್ಡುತ್ತಿರುವುದಾಗಿ ಸಂತ್ರಸ್ತ ಯುವತಿಯು ಆರೋಪ ಮಾಡಿದ್ದಾರೆ.
ಈ ಸಂಬಂಧ ಪ್ರಕರಣದ ತನಿಖಾಧಿಕಾರಿ ಎಸಿಪಿ ಕವಿತಾ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆ ಪತ್ರ ಬರೆದು ಪ್ರಕರಣ ಹಿಂಪಡೆಯುವಂತೆ ವಕೀಲರಿಗೆ ಆಮಿಷ ಒಡ್ಡುತ್ತಿರುವುದಾಗಿ ಆರೋಪಿಸಿದ್ದಾರೆ.
ಕಳೆದ ಮೇ ೩ ರಂದು ಸಂಜೆ ೪:೩೭ಕ್ಕೆ ಪ್ರದೀಪ್ ಎಂಬಾತ ವಾಟ್ಸಪ್ ಕಾಲ್ ಮಾಡಿ ನಿಮಗೆ ಸುವರ್ಣಾವಕಾಶವಿದೆ ಎಂದು ಆಮಿಷ ಒಡ್ಡಿದ್ದಾರೆ. ಕೇಸ್ ಹಿಂಪಡೆಯಿರಿ .. ಪಡೆದರೆ ಕೋಟ್ಯಾಂತರ ರೂ ಗೆ ಇತ್ಯರ್ಥ ಮಾಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.
ಇತ್ತ ರಮೇಶ್ ಜಾರಕಿಹೊಳಿ ಕೋವಿಡ್ ನೆಪ ಹೇಳಿದ್ದಾರೆ. ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಕಬ್ಬನ್ ಪಾರ್ಕ್ ನಲ್ಲಿ ನಾನು ನೀಡಿದ್ದ ದೂರಿನ ಅನ್ವಯ ವಿಚಾರಣೆಯನ್ನೂ ನಡೆಸಿಲ್ಲಎಂದು ಎಂದು ಸಂತ್ರಸ್ತೆ ಅರೋಪ ಮಾಡಿ, ಕಮಿಷನರ್ ಕಮಲ್ ಪಂತ್ ಹಾಗೂ ಪ್ರಕರಣದ ತನಿಖಾ ಅಧಿಕಾರಿ ಎಸಿಪಿ ಕವಿತಾಗೆ ದೂರು ಸಲ್ಲಿಸಿದ್ದಾರೆ.