ವಂದೇ ಭಾರತ್ ರೈಲಿಗೆ ಕಲ್ಲು

ಪಾಟ್ನಾ,ಜ.೨೧-ಬಿಹಾರದ ಕತಿಹಾರ್‌ನಲ್ಲಿ ವಂದೇ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿದ್ದು, ಹೈ ಸ್ಪೀಡ್ ರೈಲಿನ ಒಂದು ಕೋಚ್‌ನ ಕಿಟಕಿ ಗಾಜು ಜಖಂಗೊಂಡಿದೆ.
ಕತಿಹಾರ್ ಜಿಲ್ಲೆಯ ಬಲರಾಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟೆಲ್ಟಾ ರೈಲು ನಿಲ್ದಾಣದ ಬಳಿ ನಿನ್ನೆ ಈ ಘಟನೆ ನಡೆದಿದ್ದು, ೨೨೩೦೨ ಡೌನ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್‌ನ ಬಲಭಾಗದ ಗಾಜಿನ ಕಿಟಕಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ
ಇಂದು ರೈಲಿನ ಬೆಂಗಾವಲು ಪಡೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೋಚ್ ಸಿ-೬ ರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ವರದಿ ಮಾಡಿದ್ದಾರೆ.
ಈ ಸಂಬಂಧ ರೈಲ್ವೇ ಪೊಲೀಸ್ ದಲ್ಖೋಲಾ ಅವರಿಗೆ ವರದಿ ಮಾಡಲಾಗಿದ್ದು, ಅವರು ಸ್ಥಳದಲ್ಲೇ ತನಿಖೆ ನಡೆಸಲು ತನಿಖಾ ತಂಡವನ್ನು ಕಳುಹಿಸಿದ್ದಾರೆ.
ಇತ್ತೀಚೆಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಿಶಾಕಪಟ್ಟಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ ೨ ರಂದು, ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ರೈಲು ಪ್ರಾರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು.