ವಂದೇ ಭಾರತ್, ಫಾಸ್ಟ್ ಪ್ಯಾಸೇಂಜರ್ ರೈಲು ಆರಂಭಕ್ಕೆ ಮನವಿ

ರಾಯಚೂರು,ಆ.೧೦-ಕಲ್ಯಾಣ ಕರ್ನಾಟಕ ಭಾಗದಲ್ಲಿ ವಂದೇ ಭಾರತ್, ಹಾಗೂ ಹೈ ಸ್ಪೀಡ್ ರೈಲು ಸಂಚಾರ ಆರಂಭಕ್ಕೆ ರೈಲ್ವೆ ಮಂಡಳಿ ಸದಸ್ಯ ಬಾಬುರಾವ್ ಮನವಿ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲೇ ವಂದೇ ಭಾರತ್ ರೈಲು ಹಾಗೂ ಫಾಸ್ಟ್ ಪ್ಯಾಸೆಂಜರ್ ರೈಲನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭಿಸಬೇಕು. ದೇಶದ ಬೇರೆ ಬೇರೆ ಭಾಗ ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗಿದೆ.
ಆದರೆ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂದು ತಿಳಿಸಿರುವ ಬಾಬುರಾವ್ ಅವರು, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಧ್ಯಮ ಕೂಲಿ ಕಾರ್ಮಿಕರು, ಬಡವರ್ಗದವರು ತಮ್ಮ ಪ್ರಯಾಣಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ಈ ವರ್ಗದ ಜನರಿಗೆ ಕಾಯ್ದಿರಿಸುವ ಸೀಟುಗಳು ಲಭ್ಯವಾಗುತ್ತಿಲ್ಲ. ದೂರದ ಬೆಂಗಳೂರಿಗೆ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಿರುವುದು ಬಹು ಪ್ರಯಾಸಕಾರವಾಗಿದೆ ಎಂದು ತಿಳಿಸಿದ್ದಾರೆ. ವಂದೇ ಭಾರತ್ ರೈಲನ್ನು ಈ ಭಾಗದಲ್ಲಿ ಆರಂಭಿಸುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಉಳಿದಂತೆ ಕಲಬುರಗಿಯಿಂದ ಯಶವಂತಪುರಕ್ಕೆ ಹೈ ಸ್ಪೀಡ್ ರೈಲು ಮತ್ತು ಫಾಸ್ಟ್ ಪ್ಯಾಸೇಂಜರ್ ರೈಲು ಆರಂಭಿಸಬೇಕು.
ಇದರಿಂದ ಬಡ ಮತ್ತು ಮಧ್ಯಮವರ್ಗದವರಿಗೆ ಆಯಾಸರಹಿತ ಪ್ರಯಾಣ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.