ವಂಡರ್‌ಲಾ ಹಾಲಿಡೇಸ್; ಶೇ.50 ರಷ್ಟು ವಿನಾಯಿತಿ ಘೋಷಣೆ

ಬೆಂಗಳೂರು, ಜೂ.೯- ಫನ್‌ಗೇಮ್ ಪ್ರಿಯರಿಗಾಗಿ ವಂಡರ್ ಲಾ, ವಿಶೇಷ ಕೊಡುಗೆ ನೀಡಿದೆ. ಈ ಸಂದರ್ಭದಲ್ಲಿ ವಂಡರ್ ಲಾ ಟಿಕೆಟ್ ಕಾಯ್ದಿರಿಸುವವರಿಗೆ ಶೇ.೫೦ ರಷ್ಟು ರಿಯಾಯಿತಿಯನ್ನು ವಂಡರ್‌ಲಾ ಘೋಷಿಸಿದೆ.
ಲಾಕ್‌ಡೌನ್‌ನಿಂದ ಬೇಸತ್ತಿರುವ ಜನರಿಗೆ ಲಾಕ್‌ಡೌನ್ ಬಳಿಕ ಫನ್‌ಗೇಮ್‌ನಲ್ಲಿ ತೊಡಗಿಸಿಕೊಳ್ಳುವಲ್ಲಿ ಮನಸ್ಸಾಗುತ್ತದೆ. ಅಂಥವರಿಗಾಗಿಯೇ ವಂಡರ್ ಲಾ ಈ ಕೊಡುಗೆ ನೀಡುತ್ತಿದೆ.
ಪ್ರಸ್ತುತ ಇರುವ ಶುಲ್ಕದಲ್ಲಿ ಶೇ.೫೦ ರಷ್ಟು ರಿಯಾಯಿತಿ ಸಿಗಲಿದೆ. ಈಗ ಮುಂಗಡ ಕಾಯ್ದಿರಿಸಿಕೊಂಡರೆ, ಸರ್ಕಾರದ ನಿಯಮ ಸಡಿಲಗೊಂಡು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ ಕೂಡಲೇ ಈಗ ಕಾಯ್ದಿರಿಸಿಕೊಂಡ ಟಿಕೆಟ್‌ನನ್ನ ಬಳಸಿಕೊಳ್ಳಬಹುದು. ಯಾವುದೇ ದಿನವಾದರೂ ಈ ಟಿಕೆಟ್‌ನೊಂದಿಗೆ ವಂಡರ್‌ಲಾಗೆ ಭೇಟಿ ನೀಡಬಹುದು.ಇದು ಬೆಂಗಳೂರು, ಕೊಚ್ಚಿ, ಹೈದರಾಬಾದ್‌ನಲ್ಲಿರುವ ಎಲ್ಲಾ ವಂಡರ್‌ಲಾದಲ್ಲಿಯೂ ಅನ್ವಯವಾಗಲಿದೆ.
ಈ ಸೀಮಿತ ಕೊಡುಗೆ ಪಡೆಯಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ವಂಡರ್‌ಲಾ ವೆಬ್‌ಸೈಟ್ hಣಣಠಿs://ತಿತಿತಿ.ತಿoಟಿಜeಡಿಟಚಿ.ಛಿom ಪರಿಶೀಲಿಸಿ.
ಅಲ್ಲದೆ, ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಕುರಿತು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಭಾರತದ ಅತ್ಯಂತ ದೊಡ್ಡ ಹಾಗೂ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ಆಪರೇಟರ್ ಆಗಿದೆ. ಕಂಪನಿಯು ಪ್ರಸ್ತುತ ಕೊಚ್ಚಿ, ಬೆಂಗಳೂರು, ಹೈದರಾಬಾದ್‌ಗಳಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಗಳು ಹಾಗೂ ಬೆಂಗಳೂರಿನಲ್ಲಿ ವಂಡರ್‌ಲಾ ರೆಸಾರ್ಟ್ ಹೆಸರಿನ ರೆಸಾರ್ಟ್ ಹೊಂದಿದೆ.
ಅದರ ಹಲವಾರು ರೈಡ್‌ಗಳನ್ನು ವಿಶೇಷವಾಗಿ ರೂಪಿಸಲಾಗಿದೆ ಮತ್ತು ಪ್ರತಿಷ್ಠಿತ ಅಂತಾರಾಷ್ಟ್ರೀಯ
ಪೂರೈಕೆದಾರರಿಂದ ಆಮದು ಮಾಡಿದ್ದು ಅವು ಭಾರತದಲ್ಲಿ ವಿಶಿಷ್ಟವಾಗಿವೆ. ವಂಡರ್‌ಲಾ ಪಾರ್ಕ್ ಗಳು ೨೦೦೦ರಿಂದ ೩ ಕೋಟಿ ಮಂದಿ ಸಂದರ್ಶಕರು ಭೇಟಿ ನೀಡಿದ್ದು ಅವುಗಳಿಂದ ಭಾರತದಲ್ಲಿ ಅತ್ಯಂತ ಹೆಚ್ಚು ಭೇಟಿ ನೀಡಿದ ಅಮ್ಯೂಸ್‌ಮೆಂಟ್ ಪಾರ್ಕ್ ಗಳಲ್ಲಿ ಒಂದಾಗಿಸಿದೆ.