ವಂಚನೆ ಆರೋಪ: ಇಬ್ಬರ ಬಂಧನ

ಬ್ಯಾಡಗಿ,ಮೇ2: ಅನಧಿಕೃತ ವ್ಯವಹಾರದ ಹೆಸರಲ್ಲಿ ಪ್ರತಿಯೊಬ್ಬರಿಂದ 21ಸಾವಿರ ರೂಗಳನ್ನು ಡಿಪಾಸಿಟ್ ರೂಪದಲ್ಲಿ ಸಂಗ್ರಹಿಸಿ ಕೇವಲ 11 ದಿನಗಳಲ್ಲಿ ಹಣ ದ್ವಿಗುಣಗೊಳಿಸಿ ವಾರಕ್ಕೊಮ್ಮೆ 6 ಸಾವಿರ ರೂಗಳಂತೆ 6ವಾರಗಳಲ್ಲಿ 36ಸಾವಿರ ರೂಗಳನ್ನು ಮರಳಿ ನೀಡುವುದಾಗಿ ಪಟ್ಟಣದಲ್ಲಿ ಜನರನ್ನು ನಂಬಿಸಿ 85ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಬಜಾಜ್ ಶೋರೂಮ್ ಹಿಂದಿರುವ ಜಗದಂಬಾ ಹೊಟೇಲ್ ಮೇಲಿನ ಕಟ್ಟಡದಲ್ಲಿ ನಾಲ್ಕು ತಿಂಗಳ ಹಿಂದೆ ಮಾಡರ್ನ್ ಮಾರ್ಕೆಟಿಂಗ್ ಗೋಲ್ಡ್ ಟ್ರೇಡರ್ಸ ಎಂಬ ಹೆಸರಲ್ಲಿ ಬಿಜಾಪುರ ಮೂಲದ ಮಾಲೀಕರಾದ ಇರ್ಫಾನ್ ಸೈಯದ್‍ಸೋಹೆಲ್ ಶೇಖ ಹಾಗೂ ಮ್ಯಾನೇಜರ್ ಮೆಹಬೂಬಸಾಬ ಇಸ್ಮಾಯಿಲ್ ತಿಕ್ಕೋಟಿಕರ್ ಅವರುಗಳು ಸುಮಾರು 200 ಕ್ಕೂ ಹೆಚ್ಚು ಜನರಿಂದ ಹಣ ದ್ವಿಗುಣ ಹಾಗೂ ಕಂತಿನಲ್ಲಿ ಬಂಗಾರವನ್ನು ನೀಡುವ ಆಮಿಷವೊಡ್ಡಿ 85ಲಕ್ಷ ರೂಗಳನ್ನು ಡಿಪಾಸಿಟ್ ರೂಪದಲ್ಲಿ ಸಂಗ್ರಹಿಸಿ ಜನರಿಗೆ ಏನನ್ನೂ ನೀಡದೇ ವಂಚನೆ ಮಾಡಿರುವ ಬಗ್ಗೆ ಹಣ ಕಳೆದುಕೊಂಡ ಗ್ರಾಹಕರೊಬ್ಬರು ಎಪ್ರಿಲ್ 28ರಂದು ಬ್ಯಾಡಗಿ ಪೆÇಲೀಸ್ ಠಾಣೆಯಲ್ಲಿ ವಂಚನೆಯ ದೂರನ್ನು ಸಲ್ಲಿಸಿದ್ದರು.

ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬ್ಯಾಡಗಿ ಪೆÇಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು. ಕೊನೆಗೂ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಬ್ಯಾಡಗಿಯಿಂದ ರಟ್ಟಿಹಳ್ಳಿಗೆ ಹೋಗುವ ಮಾರ್ಗದಲ್ಲಿದ್ದ ಬಗ್ಗೆ ಪತ್ತೆ ಹಚ್ಚಿರುವ ಪೆÇಲೀಸರು ಎಪ್ರಿಲ್ 30ರಂದು ಚುರುಕಿನ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು, ನಂತರ ಇಬ್ಬರನ್ನೂ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.