ವಂಚಕ ಸ್ವಾಮಿಯ ಐಷಾರಾಮಿ ಕಾರುಗಳ ವಶ

ಬೆಂಗಳೂರು,ಜ.೭-ಬಿಜೆಪಿ, ಆರ್‌ಎಸ್‌ಎಸ್ ಮುಖಂಡರ ಹೆಸರಿನಲ್ಲಿ ಕೋಟ್ಯಾಂತರ ರೂಗಳ ವಂಚನೆ ಮಾಡಿ ಸಿಸಿಬಿ ಬಂಧನದಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿ ಬರೋಬರಿ ಬ್ಯಾಂಕ್ ನಲ್ಲಿ ೪೭ ಖಾತೆಗಳನ್ನು ಹೊಂದಿದ್ದಲ್ಲದೆ ಬೆಂಚ್ ,ರೇಂಜ್ ರೋವರ್ ಕಾರುಗಳ ಒಡೆಯನಾಗಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿ ಸ್ವಾಮಿಯ ಬೆಂಚ್ ,ರೇಂಜ್ ರೋವರ್ ಕಾರುಗಳನ್ನು ವಶಪಡಿಸಿಕೊಂಡು ಆತನ ೪೭ ಅಕೌಂಟ್ ಗಳ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು ಆತನ ಪತ್ನಿ ಪ್ರೇಮ ಮತ್ತು ಮಗಳು ವೈಷ್ಣವಿ ಅಕೌಂಟ್‌ಗಳು ಸಹ ಪರಿಶೀಲನೆ ನಡೆಸಿದ್ದಾರೆ.
ಯುವರಾಜ ಸ್ವಾಮಿ ಸೇವಾಲಾಲ್ ಸೇರಿದಂತೆ ಕುಟುಂಬದ ಆಸ್ತಿ ವಿವರಗಳನ್ನು ಸಬ್ ರಿಜಿಸ್ಟ್ರಾರ್‌ಗಳಿಂದ ಅಧಿಕಾರಿಗಳು ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕೆಲ ನಟಿಯರ ನಂಟು:
ಜೊತೆ ಮತ್ತಷ್ಟು ಸ್ಯಾಂಡಲ್‌ವುಡ್ ನಟಿಯರು ನಂಟು ಹೊಂದಿರುವುದು ಬೆಳಕಿಗೆ ಬಂದಿದೆ.ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ಹಣಕಾಸಿನ ವಹಿವಾಟು ನಡೆಸಿರುವ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ಸ್ವಾಮಿ ಸ್ಯಾಂಡಲ್‌ವುಡ್‌ನ ಇನ್ನೂ ಕೆಲ ನಟಿಯರ ಜೊತೆ ಸಂಪರ್ಕ ಹೊಂದಿದ್ದ ಎಂಬುದು ಪತ್ತೆಯಾಗಿದೆ.
ಆರೋಪಿ ಯುವರಾಜ್?ನ ವಶಪಡಿಸಿಕೊಂಡಿ ರುವ ಮೊಬೈಲ್ ನಿಂದ ಆತನ ನಟಿಯರ ಜೊತೆಗೆ ಹೊಂದಿದ್ದ ನಂಟು ಪತ್ತೆಯಾಗಿದೆ. ಪೋನ್ ಕರೆಗಳು, ಚಾಟಿಂಗ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು ಹಲವು ನಟಿಯರ ಜೊತೆ ಮಾತನಾಡಿರುವ ಕರೆಗಳ ವಿವರಗಳನ್ನು ಕಲೆಹಾಕಿದ್ದಾರೆ.
ಯುವರಾಜ್ ಕೆಲ ನಟಿಯರ ಜೊತೆ ಹಣಕಾಸಿನ ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮೊಬೈಲ್ ಸಂಭಾಷಣೆ:
ತನಿಖೆ ವೇಳೆ ಯುವರಾಜ್ ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ಮಾತನಾಡಿರುವುದು ಕೂಡ ಬೆಳಕಿಗೆ ಬಂದಿದೆ. ಮೊಬೈಲ್ ಕರೆಗಳು ಮತ್ತು ಟವರ್ ಲೋಕೇಷನ್ ಹಾಗೂ ಚಾಟಿಂಗ್ ಪತ್ತೆ ಮಾಡುತ್ತಿರುವ ಸಿಸಿಬಿ ಪೊಲೀಸರು ಇನ್ನಷ್ಟು ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಆರ್?ಎಸ್?ಎಸ್ ನಾಯಕರು, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಹಲವು ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಯುವರಾಜ್ ಎಂಬಾತನನ್ನು ಕಳೆದ ತಿಂಗಳು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.
ನಿವೃತ್ತ ನ್ಯಾಯಾಧೀಶೆಯೊಬ್ಬರನ್ನು ರಾಜ್ಯಪಾಲರನ್ನಾಗಿ ಮಾಡುತ್ತೇನೆಂದು ನಂಬಿಸಿ ಕೋಟ್ಯಂತರ ರೂ. ಹಣ ಪಡೆದಿದ್ದು ಕೂಡ ಬೆಳಕಿಗೆ ಬಂದಿತ್ತು.
೨೦೦೩ರಲ್ಲೇ ವಂಚನೆ:
ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯು ೨೦೦೩ರಲ್ಲೇ ಪೊಲೀಸ್ ಇಲಖೆಯ ವಂಚಕರ ಪಟ್ಟಿಯಲ್ಲಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ಆರೋಪಿಯು ಸೆವಾಲಾಲ್ ಸಂಗಮಬಸವ ಸ್ವಾಮಿಯಾಗಿ ಪರಾರಿಯಾಗಿದ್ದ ಕುಖ್ಯಾತಿ ಹೊಂದಿದ್ದಾನೆ. .
ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ರಾಜಸ್ಥಾನ ಮೂಲದ ವಿದ್ಯಾರ್ಥಿಗಳಿಗೆ
ಲಕ್ಷಾಂತರ ರೂ ವಂಚಿಸಿದ್ದು ಈ ಬಗ್ಗೆ ೨೦೦೩ರಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ೬ ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಂದು ನಾಲ್ಕೈದು ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಜೀವನ ನಡೆಸುತ್ತಿದ್ದ.
ಮತ್ತೊಂದು ಕಂಟಕ:
ಇದರ ನಡುವೆ ಯುವರಾಜ್ ಹೆಸರಲ್ಲಿ ಪ್ರಭಾವಿಗಳಿಗೆ ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡು ಉದ್ಯಮಿ ಸುಧೀಂದ್ರ ರೆಡ್ಡಿ ಅವರು ವಂಚನೆ ಸಂಬಂಧ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಗರಬಾವಿಯಲ್ ಯುವರಾಜನ ಮನೆಮೇಲೆ ದಾಳಿ ಮಾಡಿ ಬಂಧಿಸಲಾಗಿತ್ತು.
ಸಿಸಿಬಿ ಕೈಗೆ ಸಿಕ್ಕಿಬಿದ್ದಿರುವ ಯುವರಾಜ್‌ಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಸಿಬಿ ಪೊಲೀಸರ ಬಳಿಕ ಉಪ್ಪಾರಪೇಟೆ ಪೊಲೀಸರು ಯುವರಾಜ್‌ನನ್ನು ವಶಕ್ಕೆ ಪಡೆಯಲು ಸಿದ್ದರಾಗಿದ್ದಾರೆ.