ಲ್ಯಾಪ್‍ಟಾಪ್, ಟ್ಯಾಬ್ ವಿತರಣೆ

ಗಂಗಾವತಿ:ನ.10- ನಗರದ ಯೋಜನೆ ಕಚೇರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜ್ಞಾನ ತಾಣ ಉದ್ಘಾಟನೆ ಹಾಗೂ ಲ್ಯಾಪ್‍ಟಾಪ್, ಟ್ಯಾಬ್ ವಿತರಣೆ ಕಾರ್ಯಕ್ರಮವನ್ನು ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಯೋಜನೆಯ ಪಾಲುದಾರ ಕುಟುಂಬದ ಸದಸ್ಯರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಲ್ಯಾಪ್‍ಟಾಪ್ ಹಾಗೂ ಟ್ಯಾಬ್ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೂಜ್ಯ ವಿರೇಂದ್ರ ಹೆಗ್ಗಡೆಯವರು ಬಡಮಕ್ಕಳಿಗಾಗಿ ಜ್ಞಾನತಾಣ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ರಫೀ, ಸಿಬಿಎಸ್ ಬ್ಯಾಂಕನ ನಿರ್ದೇಶಕ ಚನ್ನಬಸವ ಮಾತನಾಡಿದರು.
ವಿದ್ಯಾರ್ಥಿಗಳಾದ ನೀಲಮ್ಮ, ಮಾಲನಬೀ, ತಮನ್ನಾ, ಶ್ರಾವಣಿ, ಸುಮಯ್ಯಬಾನು ಅವರಿಗೆ ಟ್ಯಾಬ್ ಹಾಗೂ ಅಯಿಸಾ, ಚೈತ್ರಾ, ಈಶ್ವರಿ ಅವರಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸಹ ಕಾರ್ಯದರ್ಶಿ ನೀಲಕಂಠಪ್ಪ ನಾಗಶೇಟ್ಟಿ, ಚನ್ನವೀರಗೌಡ್ರ ಆರಾಳ, ಯೋಜನಾಧಿಕಾರಿ ಶೇಖರಗೌಡ ಸೇರಿದಂತೆ ಇತರರಿದ್ದರು.