ಲ್ಯಾಕ್ಮೆ ಫ್ಯಾಶನ್ ಶೋ ನಲ್ಲಿ ಅನನ್ಯಾ ಪಾಂಡೆ

ಮುಂಬೈ, ಮಾ. ೧೮- ಲ್ಯಾಕ್ಮೆ ಫ್ಯಾಶನ್ ವೀಕ್‌ನ ಐದನೇ ದಿನವು ತುಂಬಾ ಅದ್ಭುತ ಹಾಗೂ ಆಕರ್ಷಕ ವಾಗಿತ್ತು. ಐದನೇ ದಿನ, ಶೆಹನಾಜ್ ಗಿಲ್, ಜಾನ್ವಿ ಕಪೂರ್-ಆದಿತ್ಯ ರಾಯ್ ಕಪೂರ್, ಡಯಾನಾ ಪೆಂಟಿ, ಅದಿತಿ ರಾವ್ ಹೈದರಿ ಮತ್ತು ಅನನ್ಯಾ ಪಾಂಡೆ ಫ್ಯಾಶನ್ ಶೋನ ರ?ಯಾಂಪ್‌ನಲ್ಲಿ ತಮ್ಮ ಶೈಲಿಯನ್ನು ತೋರಿಸಿದ್ದಾರೆ. ಈ ವೇಳೆ ಅನನ್ಯಾ ಪಾಂಡೆ ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.ಕಪ್ಪು ಮಿನಿ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.ಡಿಸೈನರ್ ರಾಹುಲ್ ಮಿಶ್ರಾ ಅವರ ಫ್ಯಾಶನ್ ಶೋನಲ್ಲಿ ನಟಿ ಅನನ್ಯಾ ಪಾಂಡೆ ಹೆಜ್ಜೆ ಹಾಕಿದ್ದಾರೆ.
ಲ್ಯಾಕ್ಮೆ ಫ್ಯಾಶನ್ ವೀಕ್‌ನ ಐದನೇ ದಿನದಂದು, ಅನನ್ಯಾ ಪಾಂಡೆ ಕೂಡ ರ್‍ಯಾಂಪ್‌ನಲ್ಲಿ ತಮ್ಮ ಹಾವ -ಭಾವ ತೋರಿಸಿದ್ದಾರೆ.ಅನನ್ಯಾ ಪಾಂಡೆ ಕಪ್ಪು ಮಿನುಗುವ ಮಿನಿ ಡ್ರೆಸ್‌ನಲ್ಲಿ ರ್‍ಯಾಂಪ್ ಮೇಲೆ ನಡೆದಾಡುತ್ತಿರುವುದು ಕಂಡುಬಂದಿದೆ. ಅನನ್ಯಾಳ ಡ್ರೆಸ್‌ನ ಬಲಭಾಗ ಸರಳವಾಗಿದ್ದರೆ, ಎಡಭಾಗವನ್ನು ಹೂವುಗಳು ಮತ್ತು ಎಲೆಗಳಿಂದ ವಿನ್ಯಾಸಗೊಳಿಸಲಾಗಿತ್ತು.ಅನನ್ಯಾ ಪಾಂಡೆ ಕಪ್ಪು ಬಣ್ಣದ ಉದ್ದನೆಯ ಬೂಟುಗಳನ್ನು ಮತ್ತು ಕಪ್ಪು ಬಣ್ಣದ ಸಿಜ್ಲಿಂಗ್ ಮಿನಿ ಡ್ರೆಸ್ ಧರಿಸಿದ್ದರು. ಫ್ಯಾಷನ್ ಶೋಗಾಗಿ, ಅನನ್ಯಾ ಡ್ರೆಸ್‌ಗೆ ಹೊಂದಿಕೆಯಾಗುವ ಕಿವಿಯೋಲೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಭಾರವಾದ ಆಭರಣಗಳನ್ನು ಧರಿಸಿರಲಿಲ್ಲ. ಡಾರ್ಕ್ ಐ ಮೇಕ್ ಆಫ್ ,ತುಂಬಾ ತಿಳಿ ಕಂದು ಬಣ್ಣದ ಲಿಪ್ ಸ್ಟಿಕ್ ಧರಿಸಿ ತಮ್ಮ ಅಲಂಕಾರ ಪೂರ್ಣಗೊಳಿಸಿದ್ದಾರೆ.
ಲ್ಯಾಕ್ಮೆ ಫ್ಯಾಶನ್ ವೀಕ್ ೨೦೨೩ ರಲ್ಲಿ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಅನನ್ಯ ಪಾಂಡೆ ರ್‍ಯಾಂಪ್ ವಾಕ್ ಮಾಡಿದ್ದಾರೆ . ಆದರೆ ಈ ಬಾರಿ ಆದಿತ್ಯ ರಾಯ್ ಕಪೂರ್ ಫ್ಯಾಶನ್ ವೀಕ್‌ನಲ್ಲಿ ಜಾನ್ವಿ ಕಪೂರ್ ಅವರೊಂದಿಗೆ ರ್‍ಯಾಂಪ್ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.
ನಟಿ ಕೊನೆಯದಾಗಿ ಖೋ ಗಯೇ ಹಮ್ ಕಹಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ನಟಿಯ ಈ ಚಿತ್ರ ಒಟಿಟಿ ವೇದಿಕೆಯಲ್ಲಿ ಬಂದಿತ್ತು. ಹಾಗಾಗಿ ವರದಿಗಳನ್ನು ನಂಬುವುದಾದರೆ, ನಟಿ ಶೀಘ್ರದಲ್ಲೇ ದೊಡ್ಡ ಬಜೆಟ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ