ಕೋಲಾರ,ಜೂ,೨೯-ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಯಲ್ಲಿ ಎಇ ಆಗಿ ಕಾರ್ಯನಿರ್ವಹಿಸುತ್ತಿರುವ ಕೋಲಾರ ಮೂಲದ ಕೋದಂಡರಾಮಯ್ಯನವರ ಕೋಲಾರದ ಕುವೆಂಪು ನಗರದ ಪೂಜ ನಿಲಯ ಮನೆ ಹಾಗೂ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಮನೆ ಮೇಲೆ ಲೋಕಾಯುಕ್ತಾ ಅಧಿಕಾರಿಗಳು ಬುಧವಾರ ಬೆಳ್ಳಂ ಬೆಳಗ್ಗೆ ದಾಳಿ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.
ಕೋಲಾರ ಲೋಕಾಯುಕ್ತ ಎಸ್.ಪಿ ಉಮೇಶ್ ನೇತೃತ್ವದಲ್ಲಿ ೧೦ ಜನ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ೬ ಗಂಟೆಯಿಂದ ಕೋಲಾರ ನಗರದ ಕುವೆಂಪು ಬಡಾವಣೆಯಲ್ಲಿರುವ ಮನೆ ಹಾಗೂ ಡೂಂಲೈಟ್ ಸರ್ಕಲ್ ಬಳಿಯಿರುವ ಅಂಗಡಿ ಮಳಿಗೆಗಳ ಮತ್ತು ತವರೂರಾದ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಸಾಗರ ಮನೆ ಮತ್ತು ತುಮಕೂರಿನ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ವಿವಿಧ ಕಡೆ ಲೋಕಾಯುಕ್ತಾ ಅಧಿಕಾರಿಗಳು ದಾಳಿ ನಡೆಸಿರುವುದರಿಂದ ಕೋಲಾರ ಲೋಕಾಯುಕ್ತಾ ಅಧಿಕಾರಿಗಳು ಎಇ ಕೋಡಂಡರಾಮಯ್ಯ ಮನೆ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ವಿವರಗಳನ್ನು ಸ್ಥಳೀಯವಾಗಿ ಬಹಿರಂಗಪಡಿಸಿಲ್ಲ.