ಲೌಕಿಕ ಜೀವನದಲ್ಲಿ ಪಾರಮಾರ್ಥಿಕ ಸತ್ಯದ ಅರಿವನ್ನು ತಿಳಿಯಬೇಕು

ಲಿಂಗಸುಗೂರ,ಮಾ.೩೦- ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಡಕಲ್ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆಯುತ್ತಿರುವ ಕಾರ್ಯಕ್ರಮ ಅಂಗವಾಗಿ ೨೧ನೇ ವೇದಾಂತ ಪರಿಷತ್ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ಮೂಲಕ ಲೌಕಿಕ ಜೀವನದಲ್ಲಿ ಪಾರಮಾರ್ಥಿಕ ಸತ್ಯದ ಅರಿವನ್ನು ತಿಳಿಯಬೇಕು ಎಂದು ಕರಡಕಲ್ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿ ಸಹಜಾನಂದ ಅವಧೂತರು ಭಕ್ತರಿಗೆ ಆಶೀರ್ವಾದದ ಮುಖಾಂತರ ಆಶಿರ್ವಚನ ನೀಡಿದರು .
ಇಂದು ಸಂಪ್ರದಾಯದಂತೆ ಸಿದ್ದಾರೂಢ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ೧೫ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹ ಮಾಡುವುದರಿಂದ ಬಡ ಕುಟುಂಬದ ಜನರಿಗೆ ಆಶ್ರಯವಾಗಿದೆ. ಸಿದ್ಧಾರೂಢರು ಜನಿಸಿದ ದಿನದಂದು ರಾಮನವಮಿ ದಿನದಲ್ಲಿ ಈ ಒಂದು ಸಾಮೂಹಿಕ ವಿವಾಹ ಮಾಡಿಕೊಳ್ಳುವ ನವ ದಂಪತಿಗಳು ಪುಣ್ಯವಂತರು ಎಂದರು.
ಈ ಸಂದರ್ಭದಲ್ಲಿ ಕೃಷ್ಣಾನಂದ ಅವಧೂತರು, ಜ್ಞಾನಾನಂದ ಸ್ವಾಮಿಗಳು, ಶಿವರಾಮನಂದ, ಭಾರತಿ ಸ್ವಾಮೀಜಿ, ಸಂಗಮೇಶ್ ಶರಣರು ಹಾಗೂ ಬಸವರಾಜ ಮ್ಯಾಗೇರಿ ಕರಡಕಲ್ ಗ್ರಾಮದ ಗೌಡರಾದ ಭೂಪನಗೌಡ ಪಾಟೀಲ್ ಕರಡಕಲ್, ಗಿರಿಮಲ್ಲನಗೌಡ ಮಾಲಿಪಾಟೀಲ್, ಶರಣಗೌಡ ಮಾಲಿಪಾಟೀಲ, ತಿಪ್ಪಣ್ಣ ಮ್ಯಾಗಳಮನಿ, ಭೀಮಣ್ಣ ಸರ್ಜಾಪುರ, ವೆಂಕಟೇಶ್ ಮುಂಬಯಿ, ಲಕ್ಷಣ ಮುಂಬಯಿ, ಪರುಶುರಾಮ ಮುದಗಲ್, ದೇವೇಂದ್ರ ಪಂಜಲರ್, ನಾಗರಾಜ್ ತೇಳಿಗೇರಿ, ರಮೇಶ್ ಮ್ಯಾಗಳಮನಿ, ಕೃಷ್ಣಪ್ಪ ನಿವೃತ್ತ ಶಿಕ್ಷಕರು, ನಾಗರಾಜ್, ತಿಪ್ಪಣ್ಣ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯದ ಮತ್ತು ಕರಡಕಲ್ ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು.