ಲೋಹ ಪುರುಷ ಸರ್ದಾರ್ ವಲ್ಲಭ ಬಾಯ್ ಪಟೇಲರ ಸೇವೆ ಅಮೋಘ: ಡಾ. ಕಲ್ಪನಾ

ಬೀದರ:ಸೆ.19: ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಹೈದರಾಬಾದ್ ಪ್ರಾಂತ ನಿಜಾಮನ ಆಡಳಿತದಲ್ಲಿತ್ತು. ಹೈದ ರಾಬಾದ್ ಪ್ರಾಂತವನ್ನು ಭಾರತ ದ ಆಡಳಿತಕ್ಕೆ ಒಳಪಡಿಸಲು ನಿಜಾಮನು ನಿರಾಕರಿಸಿದ್ದನು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಂದಿನ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರು ಕಠಿಣ ಹಾಗೂ ಐತಿಹಾಸಿಕ ನಿರ್ಣಯವನ್ನು ಕೈಗೊಂಡು ನಿಜಾಮನ ಮೇಲೆ ದಾಳಿ ಮಾಡಿ, ಹೈದರಾಬಾದ್ ಪ್ರಾಂತನ್ನು ವಶಪಡಿಸಿಕೊಂಡಿದ್ದರು. ಕಲ್ಯಾಣ ಕರ್ನಾಟಕ ಭಾಗದ ಜನರು ಲೋಹಪುರುಷ ಸರ್ದಾರ್ ವಲ್ಲಭಾಯಿ ಪಟೇಲರವರ ಸೇವೆಯನ್ನು ಸದಾ ಸ್ಮರಿಸುತ್ತಿರಬೇಕು ಎಂದು ಕರ್ನಾಟಕ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಕಲ್ಪನಾ ದೇಶಪಾಂಡೆ ಅವರು ಜನತೆಗೆ ಕರೆ ನೀಡಿದರು. ಅವರು ಇಂದು ಹೈದರಾಬಾದ್ ವಿಮೋಚನೆಯ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯ ಉತ್ಸವದ ಸಂದರ್ಭದಲ್ಲಿ, ಬೀದರನ ಜೈಹಿoದ್ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು. ದೇಶದ ರಾಜಕಾರಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರಂತಹ ದಕ್ಷ ಆಡಳಿತಗಾರರು ಹೆಚ್ಚಾಗಬೇಕೆಂದು ಅಭಿಪ್ರಾಯ ಪಟ್ಟರು. ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ರವರು ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ಓದಿಸುವುದರ ಮೂಲಕ ಪ್ರತಿಜ್ಞೆಯನ್ನು ಬೋಧಿಸಿದರು. ನಾರಾಯಣರಾವ್ ಕಾಂಬಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಂದ್ರ ಕಮಲ್ ರವರು ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಮುನಿಗ್ಯಾಲ್, ರಾಜೇಂದ್ರ ಸಿಂಗ್ ಪವಾರ, ಡಾಕ್ಟರ್ ಸುಭಾಷ ಪೆÇೀಲಾ, ಅರವಿಂದ್ ಕುಲಕರ್ಣಿ, ರಾಮಕೃಷ್ಣ ಸಾಳೆ, ಎಸ್. ಆರ್. ಬಂಡೀ, ಮಚೆoದ್ರ ಏಕಲಾರಕರ್, ಸೋಮೇ ಶ್ವರ್, ಸಂಜು ಪಾಟೀಲ್, ಅಶೋಕ ಶೀಲ ವಂತ ,ಮಲ್ಲಿಕಾರ್ಜುನ ಪಾಟೀಲ್, ಸಂಜು ಶೀಲವಂತ್, ಸುಧಾಕರ್ ಗಾದಗಿ, ಗುಂಡೆರಾವ್ ದೇಶಮುಖ, ಗುರುಸ್ವಾಮಿ, ರಮೇಶ ಕಪಲಾಪುರ್, ಲಲಿತಾಬಾಯಿ, ತಾರಾ, ಶಿಲ್ಪ, ಸಿಮರಾನ್ ಸಂಗಶೆಟ್ಟಿ ಜಗದೇವ್, ಮಂಗಲಾ ಭಾಗವತ್, ವಿನಾಯಕ್ ದೇಶಪಾಂಡೆ, ಮುಂತಾದವರು ಹಾಜರಿದ್ದರು. ನಾರಾಯಣ ರಾವ್ ಕಾಂಬಳೆಯವರ ಪ್ರಾ ಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ್ ಸೂರ್ಯಾನ ರವರು ಸ್ವಾಗತಿಸಿದರು.
ಕೊನೆಯಲ್ಲಿ ಕೋಶಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ವಂದಿಸಿದರು.