ಲೋಪ ಸರಿಪಡಿಸಿ ಖಾಸಗಿ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

ಮುಂಬೈ,ಮೇ.೩೦- ದೇಶದಲ್ಲಿ ಕೆಲವು ಖಾಸಗಿ ಬ್ಯಾಂಕ್‌ಗಳ ಆಡಳಿತದಲ್ಲಿ ಲೋಪದೋಷಗಳಿದ್ದು ಅವುಗಳನ್ನು ಸರಿಪಡಿಸಿ ಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ ದಾಸ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆರ್ ಬಿಐ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸಂಬಂಧ ೨೦೨೧ರ ಏಪ್ರಿಲ್‌ನಲ್ಲಿ ಹೊರಡಿಸಿರುವ ಸುತ್ತೋಲೆ ಪಾಲಿಸುವಂತೆ ಖಾಸಗೀ ಬ್ಯಾಂಕ್‌ಗಳಿಗೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒಗಳಿಗೆ ಸೂಚನೆ ನೀಡಿದ್ದಾರೆ.
ಆರ್ ಬಿಐ ಮೊಟ್ಟಮೊದಲ ಬಾರಿಗೆ ಆಯೋಜಿಸಿದ್ದ ಖಾಸಗಿ ಬ್ಯಾಂಕ್‌ಗಳ ನಿರ್ದೇಶಕರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಾಲ ನೀಡುವಾಗ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ಬ್ಯಾಂಕಿಂಗ್ ವಲಯ ಪ್ರಸ್ತುತ ಶೇ.೧೬.೧ ರ ಬಂಡವಾಳದ ಸಮರ್ಪಕತೆಯ ಅನುಪಾತದ ಶೇ. ೪.೪ ರಷ್ಡು ಒಟ್ಟು ಅನುತ್ಪಾದಕ ಆಸ್ತಿ ಹೊಂದಿದೆ. ಸುಮಾರು ಶೇ. ೧.೨ರಷ್ಟು ನಿವ್ವಳ ಅನುತ್ಪಾದಕ ಆಸ್ತಿ ಹೊಂದಿದೆ. ಮತ್ತು ಶೇ. ೭೩.೨ರಷ್ಟು ನಿಬಂಧನೆ ವ್ಯಾಪ್ತಿಯ ಅನುಪಾತದಂತಹ ಅನುಕೂಲಕರ ಸೂಚಕಗಳೊಂದಿಗೆ ಸ್ಥಿರತೆ ಕಾಯ್ದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕ್‌ಗಳು ಕೆಟ್ಟ ಸಾಲಗಳನ್ನು ಮರೆಮಾಚುವ ಪ್ರಯತ್ನಗಳ ಬಗ್ಗೆ ಗಮನಹರಿಸುವಂತೆ ಬ್ಯಾಂಕ್ ಗಳಿಗೆ ಕಿವಿ ಮಾತು ಹೇಳಿದ ಅವರು ಮೇಲ್ವಿಚಾರಣಾ ಪ್ರಕ್ರಿಯೆಯ ಸಮಯದಲ್ಲಿ, ಒತ್ತಡಕ್ಕೊಳಗಾದ ಸಾಲಗಳ ನೈಜ ಸ್ಥಿತಿ ಮರೆಮಾಚಲು ನವೀನ ಮಾರ್ಗಗಳನ್ನು ಬಳಸುವ ಕೆಲವು ನಿದರ್ಶನಗಳು ನಮ್ಮ ಗಮನಕ್ಕೆ ಬಂದಿವೆ” ಎಂದಿದ್ದಾರೆ.
ಡೀಫಾಲ್ಟ್‌ಗಳನ್ನು ಮರೆಮಾಡಲು ಅಂತಹ ಒಂದು ವಿಧಾನವೆಂದರೆ ಸಾಲಗಳು ಅಥವಾ ಸಾಲದ ಸಾಧನಗಳ ಮಾರಾಟ ಮತ್ತು ಮರುಖರೀದಿ ಮಾಡುವ ಮೂಲಕ ಇಬ್ಬರು ಸಾಲದಾತರನ್ನು ಒಟ್ಟಿಗೆ ತರುವ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.
ವೈಯಕ್ತಿಕ ನಿರ್ದೇಶಕರು ತಮ್ಮ ವಸ್ತುನಿಷ್ಠತೆ ಮತ್ತು ಸ್ವಾತಂತ್ರ್ಯ ಅಡ್ಡಿಪಡಿಸುವ ಆಸಕ್ತಿಯ ಸಂಘರ್ಷ. ಹೊಂದಿರಬಾರದು ಎಂದು ಹೇಳಿದ ಅವರು “ಹಿತಾಸಕ್ತಿಗಳ ಸಂಭಾವ್ಯ ಸಂಘರ್ಷ ಗುರುತಿಸಲು ಮತ್ತು ಅವುಗಳನ್ನು ನಿಭಾಯಿಸಲು ನೀತಿಗಳು ಜಾರಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳುವುದು ಮಂಡಳಿಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.