ಲೋಕ ಸ್ಪಂದನ: ಚಿಟಗುಪ್ಪ ಠಾಣೆ ಬೀದರ್ ಜಿಲ್ಲೆಗೆ ಪ್ರಥಮ

ಚಿಟಗುಪ್ಪ: ಜ.30:ಪೆÇಲೀಸ್ ಠಾಣೆಯಲ್ಲಿ ದೂರು ನೀಡಲು ಬರುವ ಜನರಿಗೆ ಠಾಣೆಯಲ್ಲಿ ದೊರೆತ ಸ್ಪಂದನೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಪೆÇಲೀಸ್ ಇಲಾಖೆ ಜಾರಿಗೊಳಿಸಿರುವ ವ್ಯವಸ್ಥೆ ‘ಲೋಕ ಸ್ಪಂದನ’ದಲ್ಲಿ ಚಿಟಗುಪ್ಪ ಪೆÇಲೀಸ್ ಠಾಣೆ ಬೀದರ್ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ.
ನಿಮ್ಮ ನುಡಿ ,ನಮ್ಮ ನಡೆ’ ಘೋಷವಾಕ್ಯದೊಂದಿಗೆ ಪರಿಚಯಿಸಿದ್ದ ಈ ವ್ಯವಸ್ಥೆಯಡಿ ಸಾರ್ವಜನಿಕರು ಪೆÇಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಮೊಬೈಲ್‍ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಠಾಣೆಯಲ್ಲಿ ದೊರಕಿದ ಸ್ಪಂದನೆ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ರೇಟಿಂಗ್ ನೀಡುತ್ತಾರೆ. 2023ನೇ ಸಾಲಿನಲ್ಲಿ ಈ ಕ್ಯೂಆರ್ ಕೋಡ್ ಮೂಲಕ ನಾಗರಿಕರು ನೀಡಿದ ಉತ್ತಮ ರೇಟಿಂಗ್ ಫಲವಾಗಿ ಪಟ್ಟಣದ ಠಾಣೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಪೆÇಲೀಸ್ ಠಾಣೆಗೆ ಭೇಟಿ ನೀಡಿದಾಗ ಸಿಕ್ಕ ಸ್ಪಂದನೆಗೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ 634 ನಾಗರಿಕರು ರೇಟಿಂಗ್ ನೀಡಿದ್ದಾರೆ. ಎಲ್ಲ ನಾಗರಿಕರು ಫೈವ್‍ಸ್ಟಾರ್ ಹಾಗೂ ಫೆÇೀರ್ ಸ್ಟಾರ್ ರೇಟಿಂಗ್ ನೀಡಿದ್ದು ವಿಶೇಷ. ಗಣರಾಜ್ಯೋತ್ಸವ ದಿನ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಅವರು ಚಿಟಗುಪ್ಪ ಠಾಣೆಯ ಪೆÇಲೀಸ್ ಸಬ್‍ಇನ್‍ಸ್ಪೆಕ್ಟರ್ ಬಾಷುಮಿಯಾ ಮತ್ತು ಕಾನ್‍ಸ್ಟೆಬಲ್ ಸಾರಿಕಾ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.