
ಕೋಲಾರ,ಆ.೨- ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಲೋಕ ಸ್ಪಂದನ ಫೀಡ್ ಬ್ಯಾಕ್‌ನ ಕ್ಯೂ ಆರ್ ಕೋಡ್ ಅನ್ನು ಅಳವಡಿಸುವಂತೆ ಆಗ್ರಹಿಸಿ, ಜಿಲ್ಲಾ ಎಸ್.ಪಿ ಕಚೇರಿಯಲ್ಲಿ ಎಎಸ್ಪಿ ಭಾಸ್ಕರ್‌ರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಎ.ವಿ.ಮಹೇಶ್ ಮಾತನಾಡಿ, ರಾಜಧಾನಿ ಬೆಂಗಳೂರಿನಾದ್ಯಂತ ಈಗಾಗಲೇ ಲೋಕ ಸ್ಪಂದನ ಕ್ಯೂಆರ್ ಕೋಡ್ ಅನ್ನು ಪೊಲೀಸ್ ಕಚೇರಿಗಳಲ್ಲಿ ಅಳವಡಿಸಿದ್ದಾರೆ. ಇದೇ ಮಾದರಿಯಲ್ಲಿ ಕೋಲಾರ ಜಿಲ್ಲೆಯಾದ್ಯಂತ ಪೊಲೀಸ್ ಕಚೇರಿಗಳಲ್ಲಿ ಲೋಕ ಸ್ಪಂದನ ಫೀಡ್ ಬ್ಯಾಕ್ ಕ್ಯೂ ಆರ್ ಕೋಡ್ ಅಳವಡಿಸಬೇಕು ಎಂದರು.
ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಪೊಲೀಸರ ವರ್ತನೆ ಮಾಡುತ್ತಿದ್ದಾರೆ ಎಂದು ತಿಳಿಯಲು, ಯಾವ ರೀತಿಯಲ್ಲಿ ಕರ್ತವ್ಯದಲ್ಲಿ ಮಾಡುತ್ತಿದ್ದಾರೆ ಎಂದು ನಿಮ್ಮ ಗಮನಕ್ಕೆ ತರುವುದರ ಮೂಲಕ ಲೋಕ ಸ್ಪಂದನ ಕ್ಯೂಆರ್ ಕೋಡ್ ಸಾರ್ವಜನಿಕರಿಗೆ ಬಹಳ ಉತ್ತಮವಾಗಿದೆ. ಶೀಘ್ರದಲ್ಲೇ ಪೊಲೀಸ್ ಕಚೇರಿಗಳಲ್ಲಿ ಲೋಕ ಸ್ಪಂದನೆ, ಕ್ಯೂ ಆರ್ ಕೋಡ್ ಅಳವಡಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆನಂದ್, ಕೆ.ಆರ್.ಎಸ್ ಪಕ್ಷದ ಕೋಲಾರ ತಾಲೂಕು ಅಧ್ಯಕ್ಷ ಮುದಾಸೀರ್, ಕೆಆರ್‌ಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಮುಳಬಾಗಿಲು ಆನಂದ್ ಇದ್ದರು.