ಲೋಕ ಸಮರ: ಕೈಗೆ ಗ್ಯಾರಂಟಿ ಶಕ್ತಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ. ೨೮- ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹ್ಯಾರಿ ಯೋಜಬೆಗಳೆ ಸಂಸತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ದೊಡ್ಡ ಶಕ್ತಿಯಾಗಲಿದೆ ಎಂದು ಕ್ರಿಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳ ಸದುಪಯೋಗ ಹೆಚ್ಚಾಗಿ ಮಹಿಳೆಯರಿಗೆ ದೊರೆತಿದೆ. ಮಹಿಳಾ ಮತದಾರರಲ್ಲಿ ಈ ಯೋಜನೆಗಳು ಕಾಂಗದರೆಸ್ ಪರ ಒಲವು ಮೂಡಿಸಲು ಹೊಸ ಸಂಚಲವನ್ನೇ ಮೂಡಿಸಿವೆ ಎಂದರು. ಗ್ಯಾರಂಟಿ ಯೋಜನೆ ಕೆಲವರಿಗೆ ಕೆಲ ಕಾರಣದಿಂದ ಬರದಿರುವ ಸಮಸ್ಯೆಗಳನ್ನು ಬಗೆಹರಿಸಲಿದೆಂದ ಅವರು.ನಮ್ಮ ಗ್ಯಾರೆಂಟಿಗಳಿಂದಲೇ ಪ್ರಭಾವಿತರಾಗಿ ಮೋದಿಯವರೇ ಗ್ಯಾರೆಂಟಿ ಎಂದು ಹೊರಟಿದ್ದಾರೆ. ಮೋದಿ ಅವರ ಸುಳ್ಳು ಭರವಶೆಗಳನ್ನು ಜನರ ಮುಂದೆ ಇಡುತ್ತೇವೆಂದರು. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆಂಬ ವಿಶ್ವಾಸ ಇದೆ. ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಬಿಜೆಪಿ ದೂರ ಆಗಬೇಕಿದೆಂದು ಜನ ಬಯಸಿದ್ದಾರೆಂದರು. ರಾಜ್ಯದಲ್ಲಿ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. ಡಿಕೆ. ಸುರೇಶ್ ಅವರು ಇಂದು ನಾಮ ಪತ್ರ ಸಲ್ಲಿಸಿದ್ದಾರೆ ಅಚರ ಗೆಲುವು ಖಚಿತ.ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿಯ ಅಧಿಕೃತ ಘೋಷಣೆ ಬಾಕಿ ಇದೆ. ಈ ತುಕರಾಂ ಅವರೇ ಅಭ್ಯರ್ಥಿಯಾಗಲಿದ್ದಾರೆಂದರು. ರಾಜ್ಯದ ೨೦ ಕ್ಷೇತ್ರದ ಗೆಲುವು ನಮ್ಮ ಗುರಿ. ಇದೆ ೨೮ ರಲ್ಲೂ ಗೆಲ್ಲವ ಸ್ಥಿತಿ ಇದೆ. ಟಿಕೆಟ್ ನೀಡಿಕೆಯಲ್ಲಿ ಯುವಕರು, ಮಹಿಳೆಯರಿಗೆ ಆಧ್ಯತೆ ನೀಡಿದೆ. ರಾಜ್ಯದಲ್ಲಿನ ಈ ಚುನಾವಣಾ ಫಲಿತಾಂಶ ಇಡೀ ದೇಶವೇ ರಾಜ್ಯದ ಕಡೆ ನೋಡುವಂತಾಗಲಿದೆಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಜವಾಬ್ದಾರಿ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ಮೊದಲು ಉಸ್ತುವಾರಿಯಾಗಿದ್ದ ಸಂತೋಷ್ ಲಾಡ್ ಅವರು ಸಹ ಗೆಲುವಿಗೆ ಸಾಮೂಹಿಕವಾಗಿ ಶ್ರಮಿಸಲಿದ್ದಾರೆ.ನಿನ್ನೆ ಸಂಡೂರಿನಲ್ಲಿ ತಾವು ಸಭೆಯಲ್ಲಿ ಭಾಗವಹಿಸಿಲ್ಲ ಎಂಬುದಕ್ಕೆ ಬೇರೆ ಅರ್ಥ ಬೇಡ, ನನಗೆ ಪಾಲಿಕೆ ಮೇಯರ್ ಚುನಾವಣೆ ಸಂಬಂದ ಬಳ್ಳಾರಿಯಲ್ಲಿದ್ದೆ. ಅಭ್ಯರ್ಥಿಯ ಅಧಿಕೃತ ಘೋಷಣೆ ನಂತರ ಅಭ್ಯರ್ಥಿ ಜೊತೆ ಪ್ರವಾಸ ಮಾಡಲಿದೆಂದರು. ಸಂಸತ್ ಚುನಾವಣೆ ಫಲಿತಾಂಶದ ನಂತರ ಸಿಎಂ ಬದಲಾವಣೆಯ ಚರ್ಚೆ ಆಗಿಲ್ಲ. ಇದೆಲ್ಲ ಊಹಾಪೋಹ. ಸಹಜವಾಗಿ ಎಲ್ಲರಿಗೂ ಪಕ್ಷದ ಅಭ್ಯರ್ಥಿಗಳ ಗೆಲಯವಿನ ಟಾಸ್ಕ ನೀಡಿದೆ. ಆ ಪ್ರಯತ್ನ ಮಾಡುತ್ತೇವೆಂದರು.