ಲೋಕ ಸಮರಕ್ಕೆ ಪೊಲೀಸರ ತಾಲೀಮ್


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.09 : ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಸ್ಥಳೀಯ ಪೊಲೀಸರು ನಗರದಲ್ಲಿ ಪಥ ಸಂಚಲನ ಮಾಡಿದರು.
ಹೊಸಪೇಟೆ ಪಟ್ಟಣ ಠಾಣೆಯ ಇನ್ಸ್‍ಪೇಕ್ಟರ್ ಲಖನ್ ಮುಸುಗುಪ್ಪಿ ನೇತೃತ್ವದಲ್ಲಿ ಸಬ್ ಇನ್ಸ್‍ಪೇಕ್ಟರ್  ಬಸವರಾಜ್ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಶನಿವಾರ ಬೆಳ್ಳಿಗ್ಗೆ  ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಮೀಸಲು ಪೊಲೀಸ ಪಡೆಯ ಸಿಬ್ಬಂದಿಗಳು ಸೇರಿದಂತೆ ಪಟ್ಟಣಠಾಣೆಯ ಸಿಬ್ಬಂದಿಗಳು ನಗರದಲ್ಲಿ ಬಸ್ ನಿಲ್ದಾಣ, ಪಟೇಲ್‍ನಗರ, ರಾಣಿಪೇಟೆ ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿದಡೆ ಪಥ ಸಂಚಲನೆ ನಡೆಸಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಲು ನಿರ್ಭೀತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿಯೂ ಪಾಲ್ಗೊಳುವಂತೆಯೂ ಸಂದೇಶ ಸಾರಿದರು.