ಲೋಕ ಚುನಾವಣೆ ರಾಜ್ಯಾದ್ಯಂತ ಕಟ್ಟೆಚ್ಚರ

ಬೆಂಗಳೂರು,ಏ.೨-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ ಭಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಹಾಗೂ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳ ಹಾಕಲಾಗಿದ್ದು,ಕೇಂದ್ರದಿಂದ ಹದಿನೈದು ತಂಡ ಬಂದಿದ್ದು, ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಂಡು ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಕಾನೂನು ಬಾಹಿರ ಚಟುವಟಿಕೆಗಳು, ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಬೆಂಗಳೂರು ಸೇರಿ ಎಲ್ಲಾ ಕಡೆಗಳಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಕೆಲವು ರೌಡಿಗಳನ್ನ ಸಿಆರ್ ಪಿಸಿ ೧೧೦ ಅಡಿ ಹೇಳಿಕೆ ದಾಖಲು ಮಾಡಿಕೊಂಡು ಎಚ್ಚರಿಕೆ ಕೊಡಲಾಗಿದೆ ಎಂದು ಹೇಳಿದರು.
ರೌಡಿಗಳ ಮನೆ ಮೇಲೆ ನಾಮಕಾವಸ್ತೆಗೆ ದಾಳಿ ನಡೆಸಿಲ್ಲ.ರೌಡಿಗಳು ರಾಜಕಾರಣಿಗಳ ಜೊತೆಗಿರಲಿ ಏನೇ ಇರಲಿ ಕಾನೂನು ಪ್ರಕಾರ ಎಲ್ಲರೂ ಒಂದೇ ಅಲೋಕ್ ಮೋಹನ್ ಪ್ರತಿಕ್ರಿಯಿಸಿದ್ದಾರೆ.