ಲೋಕ ಚುನಾವಣೆ: ಮೂರೂ ಪಕ್ಷಗಳಲ್ಲಿ ಟಿಕೆಟ್‌ಗೆ ಬಿರುಸಿನ ಲಾಬಿ

ಕೋಲಾರ, ಜ.೧೭- ಕೋಲಾರ ಜಿಲ್ಲೆಯ ಲೋಕಸಭೆಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ವಿರುದ್ದ ಬಿಜೆಪಿ, ಹಾಗೂ ಜೆ.ಡಿ.ಎಸ್. ಮೈತ್ರಿ ಪಕ್ಷದ ನೇರ ಸ್ವರ್ಧೆಗೆ ನಿರ್ಧರಿಸಲಾಗಿದ್ದರೂ ಸಹ ಇನ್ನು ಅಧಕೃತವಾಗಿ ಘೋಷಣೆಯಾಗದ ಹಿನ್ನೆಲೆಯಲ್ಲಿ ಟಿಕೆಟ್ ಗೆ ಬಿರುಸಿನ ಲಾಬಿ ಏರ್ಪಟ್ಟಿದ್ದು, ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷೆ ಕಂಡುಬರುತ್ತಿದೆ.
ಕೋಲಾರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಸತತವಾಗಿ ೭ ಬಾರಿ ಸೋಲಿಲ್ಲದ ಸರದಾರ ಎನಿಸಿದ್ದ ಕೆ.ಹೆಚ್.ಮುನಿಯಪ್ಪ ಅವರು ಸೂಪರ್ ಸ್ಟಾರ್ ಎನಿಸಿದ್ದು ೮ ನೇ ಬಾರಿಯ ಸ್ವರ್ಧೆಯಲ್ಲೂ ಗೆಲುವು ಸಾಧಿಸುತ್ತಿದ್ದರೂ ಅದರೆ ಕಾಂಗ್ರೇಸ್ ಪಕ್ಷದಲ್ಲಿನ ನಾಯಕರಲ್ಲಿನ ಭಿನ್ನಮತದಿಂದ ಕಾಂಗ್ರೇಸ್ ಪಕ್ಷದವರೇ ತಮ್ಮ ಅಭ್ಯರ್ಥಿಯನ್ನು ಸೋಲಿಸಿದರೂ ಹೊರತಾಗಿ ಕೆ.ಹೆಚ್.ಮುನಿಯಪ್ಪ ಅವರು ಸೋತಿಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಕೆ.ಹೆಚ್.ಮುನಿಯಪ್ಪನವರಿಗೆ ಪಕ್ಷದಲ್ಲಿದ್ದವರೂ ಮೋಸ ಮಾಡಿದರೂ ಅವರು ನಂಬಿದ್ದ ದೇವರು ದೇವನ ಹಳ್ಳಿಯಲ್ಲಿ ಗೆಲ್ಲಿಸಿ ಸಚಿವ ಸ್ಥಾನ ಸಿಗುವಂತೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿರುವುದು ಅದ್ಬುತ ಎಂದು ಕೆ.ಹೆಚ್. ಬೆಂಬಲಿಗರ ಪ್ರತಿಪಾದನೆಯಾಗಿದೆ. ಇದಕ್ಕೆ ಪೂರಕವಾಗಿ ಕಾಂಗ್ರೇಸ್ ಪಕ್ಷದಲ್ಲಿ ಮಾರ್ಗದರ್ಶಿ ಹಾಗೂ ರಾಜಕೀಯ ತಾಂತ್ರಿಕ ಮನುಕುಳಿ ಅವರು ಸಲಹೆ ನೀಡಿರುವ ಪ್ರಕಾರ ಈಗಾಗಲೇ ರಾಜ್ಯ ಸಂಪುಟದಲ್ಲಿರುವ ಕನಿಷ್ಠ ೧೦ ಮಂದಿ ಸಚಿವರನ್ನು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಲು ಕಾಂಗ್ರೇಸ್ ಪಕ್ಷವು ಈಗಾಗಲೇ ಸಿದ್ದಪಡೆಸಿರುವ ಪಟ್ಟಿಯಲ್ಲಿ ಕೆ.ಹೆಚ್,ಮುನಿಯಪ್ಪ ಅವರು ನಂಬರ್ ಓನ್ ಸ್ಥಾನದಲ್ಲಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಡಳಿತ ಸಂಪುಟದಲ್ಲಿ ಆಹಾರ ಖಾತೆ ರಾಜ್ಯ ಸಚಿವರೂ ಅಗಿರುವ ಕೆ.ಹೆಚ್. ಮುನಿಯಪ್ಪ ಅವರು ತಮಗೆ ಈಗಾಗಲೇ ರಾಜ್ಯದಲ್ಲಿ ಸಚಿವ ಸ್ಥಾನ ನೀಡಿದ್ದು ೫ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯದ ಅಕ್ಕಿ ವಿತರಣೆಯ ಜವಾಬ್ದಾರಿಯನ್ನು ನೀಡಲಾಗಿದೆ.ಅದನ್ನು ಪ್ರಮಾಣಿಕವಾಗಿ ನಿರ್ವಹಿಸುವ ಮೂಲಕ ಯಶಸ್ವಿ ಸಾಧಿಸುತ್ತಿದ್ದೇನೆ. ಈ ಸಂದರ್ಭಧಲ್ಲಿ ಲೋಕಸಭಾ ಚುನಾವಣೆಯ ಸ್ವರ್ಧೆ ಗೆ ಆಹ್ವಾನಿಸಲಾಗುತ್ತಿದೆ ಎಂಬ ಗೊಂದಲಕ್ಕೆ ಒಳಗಾಗಿರುವ ಕೆ.ಹೆಚ್.ಮುನಿಯಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ನನ್ನ ಬದಲು ಮಗ ನರಸಿಂಹರಾಜು ಅಥವಾ ಅಳಿಯ ಚಿಕ್ಕ ಪೆದ್ದನ್ನ ಅವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ನಾನು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿ ಗೆಲ್ಲಿಸಿ ಕೊಳ್ಳುವುದಾಗಿ ಹೈಕಮಾಂಡ್‌ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮತ್ತೊಂದು ಕಡೆ ಕೋಲಾರ ಮೀಸಲು ಕ್ಷೇತ್ರಕ್ಕೆ ಕೆ.ಹೆಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡುವುದನ್ನು ಪರೋಕ್ಷವಾಗಿ ವಿರೋಧಿಸುತ್ತಿರುವ ಘಟಬಂಧನ್ ಮಾಸ್ಟರ್ ಅವರು ಕಾಂಗ್ರೇಸ್ ಪಕ್ಷದ ಮೀಸಲು ಕ್ಷೇತ್ರದಲ್ಲಿ ಎಡಗೈ, ಬಲಗೈ ಎಂಬ ವಿವಾದ ಸೃಷ್ಟಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೇಸ್ಸಿನ ನಾಯಕರೇ ಶತ್ರುವಾಗಿದ್ದಾರೆ. ಕೆ.ಹೆಚ್.ಮುನಿಯಪ್ಪ ಅವರಿಗೆ ಪ್ರತಿಸ್ವರ್ಧಿಯಾಗಿ ಕೋಲಾರದ ಅಭಿವೃದ್ದಿ ಹರಿಕಾರ ಟಿ.ಚೆನ್ನಯ್ಯ ಅವರ ಮೊಮ್ಮಗ ಮುದ್ದುಗಂಗಾಧರ್ ಅವರಿಗೆ ಕಾಂಗ್ರೇಸ್ಸಿನಿಂದ ಟಿಕೆಟ್ ನೀಡಲು ಘಟಬಂಧನ್ ಬೆಂಬಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಅದರೆ ಕಳೆದ ಭಾರಿ ಘಟಬಂಧನ್ ತಂಡದಲ್ಲಿ ಇದ್ದಷ್ಠು ಒಗ್ಗಟ್ಟು ಈಗಾ ವಿಭಜನೆಯಾಗಿದ್ದು, ಈಗಾಗಲೇ ಕೆಲವರು ಕೆ.ಹೆಚ್.ಮುನಿಯಪ್ಪ ಮೇಲಿನ ಕೋಪವು ಕೆಲವು ನಾಯಕರಲ್ಲಿ ಶಮನ ಗೊಂಡಿದೆ. ಮುಂದಿನ ಚುನಾವಣೆಗೆ ಮ್ಯಾಚ್‌ಫಿಕ್ಸ್ ಸಿದ್ಧತೆ ಮಾಡಿಕೊಂಡಿರುವ ಸೂಚನೆಗಳು ಕಂಡು ಬರುತ್ತಿದೆ.ಹಾಗಾಗಿ ಕೆ.ಹೆಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದರೆ ಚುನಾವಣೆಯನ್ನು ಸುಲಭವಾಗಿ ಎದುರಿಸ ಬಹುದೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈಗಾಗಲೇ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತ ಪಡೆಸಿದ್ದಾರೆ.
ಕೆ.ಹೆಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಗೆಲುವುದು ಬಹುತೇಕ ಖಚಿತವಾಗಿದೆ ಒಂದು ವೇಳೆ ಸೋಲನ್ನಾಪ್ಪಿದರೂ ರಾಜ್ಯದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯ ಬಹುದೆಂಬ ಸಲಹೆಗಳನ್ನು ಕೆ.ಹೆಚ್.ಮುನಿಯಪ್ಪ ಅವರಿಗೆ ನೀಡಲಾಗುತ್ತಿದೆ. ಕಳೆದ ಬಾರಿ ಇದ್ದಷ್ಟು ಕಾಂಗ್ರೆಸ್ ಪಕ್ಷದಲ್ಲಿ ಬಲವಾದ ವಿರೋಧಿಗಳು ಈ ಚುನಾವಣೆಯಲ್ಲಿ ಇಲ್ಲವಾಗಿದ್ದು,. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಭಾವನೆಯಲ್ಲಿ ಕಾಂಗ್ರೇಸ್ ಪಕ್ಷವು ಈ ಚುನಾವಣೆಯಲ್ಲಿ ಗೆಲ್ಲುವುದು ಎಂಬ ಲೆಕ್ಕಚಾರಗಳನ್ನು ಹೈ ಕಮಾಂಡ್ ಹಾಕಲಾಗುತ್ತಿದೆ.
ಇದರ ಜೂತೆಗೆ ಜಿಲ್ಲೆಯ ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ ಅವರು ಸಹ ಲೋಕಸಭಾ ಟಿಕೆಟ್‌ಗಾಗಿ ಲಾಭಿಯನ್ನು ಬಹುದಿನದಿಂದ ನಡೆಸುತ್ತಿದ್ದಾರೆ. ಕೋಲಾರಕ್ಕೆ ಸಿದ್ದರಾಮಯ್ಯ ಅವರನ್ನು ಕರೆತರಲು ಪ್ರಯತ್ನಿಸಿದವರಲ್ಲಿ ಪ್ರಮುಖ ಪಾತ್ರವಹಿಸಿದ್ದರು. .ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷ ಘಟಬಂಧನ್ ನಾಯಕ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಅವರ ಜೊತೆಯಲ್ಲಿದ್ದು ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚು ಪ್ರಚಲಿತರಾಗಿದ್ದರು.ಹಾಗಾಗಿ ಸಿ.ಎಂ.ಮುನಿಯಪ್ಪ ಅವರನ್ನು ಮುಂದು ಮಾಡಿ ಕೊಂಡು ಕಾಂಗ್ರೇಸ್ ಪಕ್ಷದಲ್ಲಿ ಪರೋಕ್ಷವಾಗಿ ಘಟಬಂಧನ್ ತಂಡವು ಲಾಭಿ ನಡೆಸುತ್ತಿದೆ. ಇದಕ್ಕೆ ರಾಜ್ಯ ಮಟ್ಟದಲೂ ಹಲವು ದಲಿತ ನಾಯಕರು ಬೆಂಬಲಿಸುತ್ತಿದ್ದು ಹೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ.
ಒಟ್ಟಾರೆಯಾಗಿ ಕಾಂಗ್ರೆಸ್ ಜಿಲ್ಲೆಯಲ್ಲಿ ವಿರೋಧ ಪಕ್ಷದವರಿಗಿಂತ ತಮ್ಮ ಪಕ್ಷದಲ್ಲಿರುವ ವಿರೋಧಿಗಳಿಂದಲೇ ಹೆಚ್ಚು ನಷ್ಟಕ್ಕೆ ತುತ್ತಾಗುವ ಸಂಭವವನ್ನು ಅಲ್ಲಗೆಳೆಯುವಂತಿಲ್ಲ. ಕೆ.ಹೆಚ್.ಮುನಿಯಪ್ಪ ಅವರಿಗೆ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಹಾಗೂ ಮುದ್ದು ಗಂಗಧಾರ್ ಅವರು ಪೈಪೋಟಿ ನ್ವರ್ಧೆ ನೀಡುತ್ತಿರುವುದು ಕಾಂಗ್ರೇಸ್ ವಲಯದಲ್ಲಿ ಸ್ವಷ್ಟವಾಗಿದೆ.
ಬಿಜೆಪಿ ಪಕ್ಷದಲ್ಲಿ ಜೆ,ಡಿ.ಎಸ್. ಪಕ್ಷವು ಮೈತ್ರಿಯಾಗಿರುವ ಹಿನ್ನಲೆಯಲ್ಲಿ ಯಾವ ಪಕ್ಷಕ್ಕೆ ಲೋಕಸಭೆಯಲ್ಲಿ ಟಿಕೆಟ್ ನೀಡುತ್ತಾರೆ ಎಂಬುವುದು ಸ್ವಷ್ಟವಾಗಿಲ್ಲ. ಕೆಲವು ದಿನಗಳ ಹಿಂದೆ ಜೆ.ಡಿ.ಎಸ್. ಪಕ್ಷವು ರಾಜ್ಯದಲ್ಲಿ ೮ ಸ್ಥಾನಗಳನ್ನು ಜೆ.ಡಿ.ಎಸ್. ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ವರಿಷ್ಟರಲ್ಲಿ ಮನವಿ ಮಾಡಿ ಕೊಂಡಿತ್ತು ಎರಡು ಪಕ್ಷಗಳ ಮುಖಂಡರು ನಡೆಸಿದ ಮಾತುಕತೆಯಲ್ಲಿ ೫ ಸ್ಥಾನಗಳನ್ನು ಜೆ.ಡಿ.ಎಸ್. ಪಕ್ಷಕ್ಕೆ ಬಿಟ್ಟು ಕೊಡಲು ಸಮ್ಮತಿ ನೀಡಿದೆ ಎನ್ನಲಾಗಿದೆ. ಈ ೫ ಸ್ಥಾನಗಳಲ್ಲಿ ಕೋಲಾರ ಮೀಸಲು ಕ್ಷೇತ್ರವನ್ನು ಕೇಳಲಾಗಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಮುಳಬಾಗಿಲು ಹಾಗೂ ಶ್ರೀನಿವಾಸಪುರ ಎರಡು ವಿಧಾನ ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜೂತೆಗೆ ಕಳೆದ ಬಾರಿ ಬಿಜೆಪಿ ಪಕ್ಷವು ಕಾಂಗ್ರೇಸ್ ಪಕ್ಷಕ್ಕಿಂತ ಸುಮಾರು ೨ ಲಕ್ಷಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿಗೆ ನೀಡಿತ್ತು. ಸಂಸದ ಎಸ್.ಮುನಿಸ್ವಾಮಿ ಅವರು ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಪರವಾಗಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಜೆ.ಡಿ.ಎಸ್. ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರಗಳನ್ನು ಮಾಡಲಾಗಿದೆ
ಜೆ.ಡಿ.ಎಸ್.ವು ಈ ಭಾರಿ ಬೆಂಗಳೂರಿನ ಬಿ.ಬಿ.ಎಂ.ಪಿ. ಕಮೀಷನರ್ ಹಾಗೂ ರಾಜ್ಯದ ಉನ್ನತ ಮಟ್ಟದಲ್ಲಿ ಕಾರ್ಯದರ್ಶಿಗಳಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಚಿಂತಿಸಲಾಗಿದೆ.ಜಿಲ್ಲೆಯ ಐ.ಎ.ಎಸ್. ಅಧಿಕಾರಿ ದಿವಂಗತ ಮುನಿಸ್ವಾಮಿ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ದಂಪತಿಗಳ ಅಳಿಯರಾಗಿರುವ ಮಂಜುನಾಥ್ ಪ್ರಸಾದ್ ಅವರ ಬೆನ್ನ ಹಿಂದೆ ಜಿಲ್ಲೆಯಲ್ಲಿ ಬಹು ಸಂಖ್ಯಾತರಾಗಿರುವ ಬೋವಿ ಸಮುದಾಯದ ಸಂಪೂರ್ಣ ಬೆಂಬಲ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಮಂಜುನಾಥ್ ಪ್ರಸಾದ್‌ಗೆ ಟಿಕೆಟ್ ತಪ್ಪಿದರೆ ಮಂಗಮ್ಮ ಮುನಿಸ್ವಾಮಿ ಅವರ ಪುತ್ರ ಮಲ್ಲೇಶ್ ಮುನಿಸ್ವಾಮಿಯವರಿಗೆ ನೀಡ ಬೇಕೆಂದು ಕೇಳಲಾಗುತ್ತಿದೆ. ಇವರ ಜೂತೆ ಮುಳಬಾಗಿಲು ಕ್ಷೇತ್ರದ ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ದೇವನಹಳ್ಳಿಯ ಕ್ಷೇತ್ರದ ನಿಸರ್ಗ ನಾರಾಯಣಸ್ವಾಮಿ ಅವರ ಹೆಸರುಗಳು ಜೆ.ಡಿ.ಎಸ್.ನಲ್ಲಿ ಚಾಲ್ತಿಯಲ್ಲಿದೆ.
ಬಿಜೆಪಿ ಪಕ್ಷದಲ್ಲಿ ಹಾಲಿ ಸಂಸದ ಎಸ್.ಮುನಿಸ್ವಾಮಿ ಅವರ ಹೆಸರನ್ನು ಹೊರತು ಪಡೆಸಿದರೆ ಉಳಿದವರ ಹೆಸರುಗಳು ಆಟಕ್ಕೊಂಟು ಲೆಕ್ಕಕ್ಕೆ ಇಲ್ಲದಂತೆ ಎಸ್.ಮುನಿಸ್ವಾಮಿ ಅವರಿಗೆ ಎಸ್.ಮುನಿಸ್ವಾಮಿಯೇ ಸಾಟಿಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೆಸರು ಡಮ್ಮಿ ಅಭ್ಯರ್ಥಿಯಂತೆ ಕೇಳಿ ಬರುತ್ತಿದೆ ಹೊರತಾಗಿ ಅವರು ಚುನಾವಣೆಯಲ್ಲಿ ಸ್ವರ್ಧಿಸುವಂತ ಯಾವ ಪ್ರಯತ್ನಗಳು ಕಂಡು ಬರುತ್ತಿಲ್ಲ.
ಸಂಸದ ಎಸ್.ಮುನಿಸ್ವಾಮಿ ಅವರು ಕೆ.ಹೆಚ್. ಮುನಿಯಪ್ಪ ಅವರ ವಿರೋಧ ಅಲೆಯಲ್ಲಿ ಹಾಗೂ ಘಟಬಂಧನ್ ಕೃಪಕಟಾಕ್ಷದಿಂದ ಆಯ್ಕೆಯಾದರು ಎಂಬುವುದರಲ್ಲಿ ಎರಡನೇ ಮಾತಿಲ್ಲ. ಇದರ ಜೂತೆಗೆ ನಮೋ ಹಿಂದುತ್ವದ ಬಲವು ಸೇರಿ ದಡ ಸೇರಿದರು ಎಂಬುವುದು ಸತ್ಯಾಂಶವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಎಸ್.ಮುನಿಸ್ವಾಮಿ ಅವರು ಸಂಸದರಾದ ಮೇಲೆ ಐ.ಸಿ.ಯು.ನಲ್ಲಿದ್ದ ಬಿಜೆಪಿಯಲ್ಲಿ ಚೇತರಿಕೆ ಕಂಡು ಬಂದಿದೆ. ಕಾಂಗ್ರೇಸ್ ಪಕ್ಕಕ್ಕೆ ವಿರುದ್ದವಾಗಿ ಸಾಟಿಯಾಗಿರುವ ಬಿಜೆಪಿಯಲ್ಲಿ ಅಬ್ಬರಿಸುವ ಹವಾ ಮುಸಿಸ್ವಾಮಿ ಸೃಷ್ಠಿಸಿದ್ದಾರೆ. ಜೆ.ಡಿ.ಎಸ್ ಪಕ್ಷಕ್ಕೆ ಮತದಾರರು ಇದ್ದಾರೆ ಅದರೆ ಅಬ್ಬರಿಸುವವರು ಇಲ್ಲದೆ ಕ್ಷಿಪ್ರ ಚಟುವಟಿಕೆಗಳ ಕೊರತೆಯಿಂದ ತೊಕಡಿಸುತ್ತಿದೆ. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರು ಇತ್ತೀಚೆಗೆ ಅನಾರೋಗ್ಯದಿಂದ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಜೆ.ಡಿ.ಎಸ್. ನಿಂದ ಆಯ್ಕೆಯಾಗಿರುವ ಇಬ್ಬರು ಶಾಸಕರು ತಮ್ಮ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದ್ದು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವವರು ಮುನಿಸ್ವಾಮಿ ಹೊರತು ಪಡೆಸಿದರೆ ಬೇರೆಯವರು ಇಲ್ಲವಾಗಿದೆ.
ಒಟ್ಟಾರೆಯಾಗಿ ಕಾಂಗ್ರೇಸ್ ಪಕ್ಷದಲ್ಲಿ ಮಾತ್ರ ಲೋಕಸಭೆಗೆ ಹೆಚ್ಚಿನ ಪೈಪೋಟಿ ಕಂಡು ಬರುತ್ತಿರುವುದು ಕೊತೂಹಲಕಾರಿಯಾಗಿದೆ. ಕೆ.ಹೆಚ್.ಮುನಿಯಪ್ಪ ಅವರಿಗೆ ಜೆ.ಡಿ.ಎಸ್. ಪಕ್ಷದಲ್ಲಿ ಮಂಜುನಾಥ್ ಪ್ರಸಾದ್, ಬಿಜೆಪಿ ಪಕ್ಷದಲ್ಲಿ ಹಾಲಿ ಸಂಸದ ಎಸ್.ಮುನಿಸ್ವಾಮಿ ಇವರಿಬ್ಬರಲ್ಲಿ ಯಾರೇ ಟಿಕೆಟ್ ಪಡೆದರೂ ಪೈಪೋಟಿ ಕಂಡು ಬರುವ ಸಾಧ್ಯತೆ ಇದೆ. ಉಳಿದಂತೆ ಇತರೆ ಅಕಾಂಕ್ಷಿಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗುವುದು ಎಂಬ ರಾಜಕೀಯ ವಿಮರ್ಷೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.