ಲೋಕ ಕಲ್ಯಾಣಾರ್ಥಕ್ಕಾಗಿ ಯೋಗ ನಮಸ್ಕಾರ

ಕೋಲಾರ,ಜು.೩೧- ತಾಲ್ಲೂಕಿನ ಶ್ರೀ ಕ್ಷೇತ್ರ ಅಂದ್ರಹಳ್ಳಿ ಬೆಟ್ಟದ ಶ್ರೀ ಸೂರ್ಯ ಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಯೋಗ ನಮಸ್ಕಾರಗಳನ್ನು ಮಾಡಲಾಯಿತು.
ಲೋಕ ಕಲ್ಯಾಣಾರ್ಥವಾಗಿ ಭಾನುವಾರ ಮುಂಜಾನೆ ೫ ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸೂರ್ಯ ನಮಸ್ಕಾರ, ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ, ಶಿವ ನಮಸ್ಕಾರ, ಹನುಮ ನಮಸ್ಕಾರ, ದುರ್ಗಾ ನಮಸ್ಕಾರ, ವಿಷ್ಣು ನಮಸ್ಕಾರವನ್ನು ಯೋಗ ಬಂಧುಗಳು ಮಾಡಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಕೀಲರ ಭವನ ಶಾಖೆಯ ಯೋಗ ಶಿಕ್ಷಕರಾದ ಮಾಕೊಂಡಣ್ಣ ,ಶ್ರೀನಿವಾಸಣ್ಣ, ಯೋಗ ಬಂಧುಗಳಾದ ಉಮಾಶಂಕರ್, ಪತ್ರಕರ್ತ ಚಂದ್ರು, ಮುರಳಿ, ಋಷಿಲ್, ಬೀಬಿಜಾನ್, ರಾಜೇಶ್ವರಿ, ಲತಾ, ಆಶಾ, ರಾಣಿ, ಅಮಲ, ಸತೀನಾ ಮತ್ತಿತರರಿದ್ದರು.