ಲೋಕ ಕಲ್ಯಾಣಕ್ಕಾಗಿ ಹೋಮ

ಕೊಟ್ಟೂರು ಸೆ 16 :ಪಟ್ಟಣದ ತೇರು ಬಯಲು ಬಸವೇಶ್ವರಸ್ವಾಮಿಯ ದೇವಾಲಯದ ಆವರಣದಲ್ಲಿ ಇಂದು ನವಗ್ರಹ ಪೂಜೆ ಹಾಗೂ ಹೋಮ ಹವನ ಪೂಜೆ ನಡೆಸಲಾಯಿತು.
ದೇವಾಲಯದಲ್ಲಿ ಕಳೆದ 48 ದಿನಗಳ ಹಿಂದೆ ಗಣಪತಿ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು ಇದರ ಅಂಗವಾಗಿ ವಿಶೇಷ ಪೂಜೆ ಹೋಮಗಳನ್ನು ತೇರುಬಯಲು ಬಸವೇಶ್ವರ ವಿನಾಯಕ ಮಿತ್ರ ಮಂಡಳಿಯ ಯುವಕರು ಆಯೋಜಿಸಿದ್ದರು.
ವಿಶೇಷ ಪೂಜೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.ಅಟವಾಳ್ಗಿ ಸಂತೋಷ ಕುಮಾರ, ಬಣಕಾರ ಗುರು ಸಿದ್ದಪ್ಪ,
ಬಟ್ಟೆ ಅಂಗಡಿ ಗುರುಬಸವರಾಜ, ಅಜ್ಜಪ್ಪ, ಪ್ರಕಾಶ, ಚಂದ್ರ, ಮುತ್ತು, ಮರಿಕೊಟ್ರೇಶ ಸೇರಿದಂತೆ ಆನೇಕರಿದ್ದರು. ಪೂಜೆಯ ನಂತರ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು.