
ದಾವಣಗೆರೆ; ಮಾ.8: ಶ್ರೀ ಯೋಗಿ ನಾರೇಯಣರು ಬಳೆಯ ವ್ಯಾಪಾರ ಮಾಡುತ್ತಲೇ ಕಾಲಜ್ಞಾನ ಬರೆದಂತಹ ಮಹಾತ್ಮರು. ಎಲ್ಲ ಸಮಾಜಕ್ಕೂ ಸಲ್ಲುವಂತೆ ಕನ್ನಡ, ತೆಲುಗು, ಭಾಷೆಗಳಲ್ಲಿ ಅದ್ವೀತಿಯವಾದ ಆಧ್ಯಾತ್ಮಾ ಚಿಂತನೆಯನ್ನೊಳಗೊಂಡ ಕೀರ್ತನೆಗಳು ತತ್ವಪದಗಳು, ವೇದಾಂತ ಸಾರವಳಿಗಳನ್ನು ಸರಳ ಭಾಷೆಯಲ್ಲಿ ರಚಿಸಿದವರು ತಾತಯ್ಯನವರು. ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೀ ಯೋಗಿ ನಾರೇಯಣರÀ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಶ್ರೀ ಯೋಗಿ ನಾರೇಯಣ ಬಲಿಜ ಸಂಘ ಇವರ ಸಹಯೋಗದೊಂದಿಗೆ ಬಲಿಜ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಜರುಗಿದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀ ಯೋಗಿ ನಾರೇಯಣರು ಸಮಾಜ ಸುಧಾರಕರಾಗಿದ್ದು, ಅವರು ರಚಿಸಿದ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ, ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದರು.17 ನೇ ಶತಮಾನವು ಅನೇಕ ಅವಧೂತರನ್ನು ಕಂಡ ಕಾಲಘಟ್ಟದಲ್ಲಿ ಯೋಗಿ ನಾರೇಯಣರು ಒಬ್ಬರು. ಜೀವನ ಜಂಜಾಟದಿಂದ ಲೌಕಿಕತೆಯಿಂದ ಅಲೌಕಿಕತೆಯಕಡೆಗೆ ವಾಲಿದ ಮಹಾ ಪವಾಡ ಪುರುಷ, ಸಾಮಾನ್ಯ ಜನರ ಒಳಿತಿಗಾಗಿ ಯಾವುದೇ ಜಾತಿ, ಜನಾಂಗ ಹಾಗೂ ಬೇದ ಭಾವವಿಲ್ಲದೆ ಕೀರ್ತನೆಗಳನ್ನು ಹಾಡುವ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿದವರು. ಮುಂದಿನ ಪೀಳಿಗೆಗೆ ಅವರ ತತ್ವಗಳು ದಾರಿದೀಪವಾಗಿದೆ ಎಂದರು.