ಲೋಕ ಕಲ್ಯಾಣಕ್ಕಾಗಿ ಶಿರಡಿ ಸಾಯಿ ಬಾಬಾ ಯಾತ್ರೆ

ವಾಡಿ: ನ.24:ತೆಲಂಗಾಣ ರಾಜ್ಯದ ನಾರಾಯಣ ಜಿಲ್ಲೆಯ ಮತಕಲ ಪಟ್ಟಣದ ಎಸ್.ಎಸ್ ನರಸಿಂಹ ಎನ್ನುವ ವ್ಯಕ್ತಿಯು ಲೋಕಕಲ್ಯಾಣಕ್ಕಾಗಿ ಶಿರಡಿ ಸಾಯಿ ಬಾಬಾ ದರ್ಶನ ಯಾತ್ರೆಯನ್ನು ರಾವೂರ ಗ್ರಾಮದ ಮೂಲಕ ಸಾಗಿದರು.

ಸ್ವಾಮಿ ನರಸಿಂಹ ಅವರ ಕನಸಲ್ಲಿ ಶಿರಡಿ ಸಾಯಿ ಬಾಬಾ ಬಂದು ಲೋಕಕಲ್ಯಾಣಕ್ಕಾಗಿ ತಕ್ಷಣವೇ ಇದ್ದ ಸ್ಥಳದಿಂದ ಪಾದಯಾತ್ರೆಯ ಮೂಲಕ ಬರಬೇಕು ಎನ್ನುವ ಸಂದೇಶ ಕನಸಲ್ಲಿ ಬಂದಿರುತ್ತದೆ. ಆದ್ದರಿಂದ ಮತಕಲ ಪಟ್ಟಣದಿಂದ ಯಾದಗಿರಿ, ಕಲಬುರಗಿ, ಆಳಂದ, ಉಮರ್ಗಾ, ಅಹ್ಮೆದನಗರದಿಂದ ಶಿರಡಿ ಸಾಯಿ ಬಾಬಾನ ದರ್ಶನಕ್ಕೆ ತಲುಪಲಿದ್ದೆನೆ ಎಂದು ನರಸಿಂಹ ಸಂಜೆವಾಣಿಗೆ ತಿಳಿಸಿದರು.

ಸೂಮಾರು 600 ಕೀ.ಮಿ ದೂರ ಕ್ರಮಿಸುತ್ತಿದ್ದು, 41 ದಿನಗಳು ಬೇಕಾಗಲಿವೆ. ದಾರಿಯಲ್ಲಿ ಸಣ್ಣ-ಪುಟ್ಟ ಅಡೆತಡೆ ಉಂಟಾಗುತ್ತಿದೆ, ಆದರೆ, ಶಿರಡಿ ಸಾಯಿ ಬಾಬಾನ ಅನುಗ್ರಹದಿಂದ ಅಡೆತಡೆ ದೂರವಾಗುತ್ತಿವೆ. ಜನರಿಂದ ಕೂಡಾ ಉತ್ತಮ ಸಹಕಾರ ಸಿಗುತ್ತಿದೆ. ರಾವೂರನ ಬಸಯ್ಯಾಸ್ವಾಮೀ ನಂದಿಕೋಲ ಅವರ ಮನೆಗೆ ಭೇಟಿ ನೀಡಿದಾಗ ಉತ್ತಮ ಸಹಕಾರದಿಂದ ಉಪಚರಿಸಿದರು ಎಂದರು.