ಲೋಕ ಕಲ್ಯಾಣಕ್ಕಾಗಿ ಶಾಂತಿ ಪೂಜೆ

ಮೈಸೂರು, ನ.21: ಅರವಿಂದ ನಗರ ನಿವಾಸಿಗಳಿಂದ ಅರವಿಂದ ನಗರದ ಅರಳಿಕಟ್ಟೆಯಲ್ಲಿ ದೇಶಕ್ಕೆ ಹಿಡಿದಿರುವ ಮಹಾಮಾರಿ ಕೋರೋನಾ ದೇಶ ಬಿಟ್ಟು ತೊಲಗಲಿ ಎಂದು ಲೋಕ ಕಲ್ಯಾಣಕ್ಕಾಗಿ ಶಾಂತಿ ಪೂಜೆಯನ್ನು ಹಾಗೂ ಗಣಪತಿ ಮತ್ತು ನವಗ್ರಹ ಹೋಮ ವನ್ನು ನೆರವೇರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ದೇಶದಿಂದ ಈ ಮಹಾಮಾರಿ ಕೊರೂನಾ ತೊಲಗಲಿ ಎಂದು ನಾವು ಎಲ್ಲಾ ಒಟ್ಟಾಗಿ ಸೇರಿ ವಿಶೇಷ ಹೋಮ ನಡೆಸುತ್ತಿದ್ದೇವೆ ಜನರು ಸರ್ಕಾರ ಆದೇಶ ನೀಡಿರುವ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಈಗಾಗಲೇ ಎಲ್ಲಾ ಸಂಘ ಸಂಸ್ಥೆಗಳು ಅತಿ ಹೆಚ್ಚು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಕೆಲವರು ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ ಜೀವ ಇದ್ದರೆ ಜೀವನ ಅದನ್ನು ಮರೆಯಬಾರದು ಕೂರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಇನ್ನೂ ಈ ಮಹಾಮಾರಿಗೆ ವ್ಯಾಕ್ಸಿನ್ ಬಂದಿಲ್ಲ ದಯಮಾಡಿ ಸಾರ್ವಜನಿಕರು ಇನ್ನಾದರೂ ಎಚ್ಚೆತ್ತುಕೊಳ್ಳಿ ಇಡೀ ಜಗತ್ತೇ ಭಗವಂತನಲ್ಲಿ ಪ್ರಾರ್ಥಿಸೋಣಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ಸಿ.ವೈ.ಶಿವೇಗೌಡ ,ರಾಜೇಶ್ ,ಶೋಭಾ ರಾಜೇಶ್, ಮಲ್ಲೇಶ್ , ಪೈಲ್ವಾನ್ ಸುನೀಲ್, ಶ್ವೇತಾ, ಜ್ಯೋತಿ ಮತ್ತು ಇನ್ನಿತರರು ಹಾಜರಿದ್ದರು