
ಕೋಲಾರ,ಜು,೧೭- ನಗರದ ಕಠಾರಿಪಾಳ್ಯದಲ್ಲಿ ಊರ ಹಬ್ಬದ ಪ್ರಯುಕ್ತ ಬೆಂಗಳೂರಿನ ಅಣ್ಣಮ್ಮ ದೇವಿಯೊಂದಿಗೆ ದೌಪತಮ್ಮ, ಕಠಾರಿ ಗಂಗಮ್ಮ, ಸಫಲಮ್ಮ, ಮಹೇಶ್ವರಮ್ಮ, ನೆಲ ಗಂಗಮ್ಮ, ಕಾಳಿಕಾಂಭ, ಮಾರಮ್ಮ, ಚಾಮುಂಡೇಶ್ವರಿ ಸೇರಿದಂತೆ ನವದುರ್ಗಿಯರ ಉತ್ಸವದ ಮಾತೆಯರನ್ನು ವಿವಿಧ ದೇವಾಲಯಗಳಿಂದ ಕರೆಸಿ ಧರ್ಮರಾಯ ದೌಪತಮ್ಮ ದೇವಾಲಯದಲ್ಲಿ ಸ್ಥಾಪಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆಗಳನ್ನು ಮಾಡಲಾಯಿತು,
ದೇವಾಲಯದ ಮುಂದೆ ಬೃಹತ್ ಪೆಂಡಲ್ ಮತ್ತು ಚಪ್ಪರಗಳನ್ನು ನಿರ್ಮಿಸಿ, ದೇವರಿಗೆ ವಿಶೇಷವಾದ ಪೀಠಗಳನ್ನು ಸ್ಥಾಪಿಸಿ ಅಭಿಷೇಕ, ವಿಶೇಷ ಪೂಜಾ ಕಾರ್ಯ ಹೂವಿನ ಅಲಂಕಾರಗಳನ್ನು ಮಾಡಲಾಗಿತ್ತು, ಪೇಟೆಯಲ್ಲಿನ ಪ್ರತಿ ಮನೆಯವರು ದೇವಾಲಯಕ್ಕೆ ಅಗಮಿಸಿ ನವ ದೇವತೆಗಳಿಗೆ ತಂಬಿಟ್ಟು ವಿಶೇಷವಾದ ದೀಪಗಳಿಂದ ಅರತಿಯನ್ನು ಎತ್ತಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಸಿದರು ಬೆಳಿಗ್ಗೆಯಿಂದ ದೇವಾಲಯದಲ್ಲಿ ಕಿಕ್ಕಿರಿದ ಭಕ್ತಾಧಿಗಳಿಂದ ಪೂಜೆ ಸಲ್ಲಿಸಿದರು, ಪ್ರಸಾದ ವಿನಿಯೋಗದ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ವಿಶೇಷ ಎಂದರೆ ಯಾವೂದೇ ರಾಜಕೀಯ ವ್ಯಕ್ತಿಗಳನ್ನು ಕರೆಸದೆ ಯಾವೂದೇ ಫ್ಲೇಕ್ಸಿಗಳನ್ನು ಅಳವಡಿಸದೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ. ಎಲ್ಲಾ ಯುವಕರು ಒಗ್ಗಟ್ಟಿನಿಂದ ಊರ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು,