ಲೋಕ ಕಲ್ಯಾಣಕ್ಕಾಗಿ ಕೊಟ್ಟ ಆಸ್ತಿ ಸಾರ್ವಜನಿಕರಿಗೆ ಸೇರಬೇಕು

 ದಾವಣಗೆರೆ.ಸೆ.೧೩: ಚಿತ್ರದುರ್ಗ ಮುರುಘಾಶ್ರೀ ಮಠ ಮತ್ತು ಜಾಗವನ್ನು ಕ್ರಿ.ಶ. ೧೬೧೧ ರಲ್ಲಿ ಭರಮಪ್ಪ ನಾಯಕರು ಲೋಕ ಕಲ್ಯಾಣಕ್ಕಾಗಿ ೯೦೦ ಎಕರೆ ಜಾಗ ಕೊಟ್ಟ ಕೊಡುಗೆಯಾಗಿದ್ದು, ಲೋಕ ಕಲ್ಯಾಣಕ್ಕಾಗಿ ಕೊಟ್ಟ ಆಸ್ತಿ ಸಾರ್ವಜನಿಕರಿಗೆ ಸೇರಬೇಕಾಗಿರುತ್ತದೆ. ಕೂಡಲೇ ಮುರುಘಾಶರಣರು ಒಂದು ಸಮುದಾಯಕ್ಕೆ ಮಾಡಿರುವ ಟ್ರಸ್ಟ್ ಅನ್ನು ಸೂಪರ್‌ಸೀಡ್ ಮಾಡಿ ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂತರ ಮಠದ ನಾಯಕರು ಭಕ್ತರಾಗಿ, ಸಾರ್ವಜನಿಕವಾಗಿ ಸೇವೆ ಮಾಡಿರುತ್ತಾರೆ . ಕೆರೆ ಮತ್ತು ಕೋಟೆಗಳನ್ನು ಕಟ್ಟಿ ಸಾರ್ವಜನಿಕರ ನೆಮ್ಮದಿಗೆ ಹೋರಾಟ ಮಾಡಿರುತ್ತಾರೆ. ಸದರಿ ಮಠದ ಆವರಣದಲ್ಲಿ ಚೌಡೇಶ್ವರಿ ದೇವಸ್ಥಾನವಿದೆ. ಮತ್ತು ಮದಕರಿ ನಾಯಕರು ಯುದ್ಧಕ್ಕೆ ಬಳಸಿದ ಯುದ್ಧೋಪಕರಣಗಳು ಸಹಾ ಮಠದಲ್ಲಿದ್ದು, ತುಕ್ಕು ಹಿಡಿಯುವ ಪರಿಸ್ಥಿತಿಗೆ ಬಂದಿದೆ. ಮುರುಘಾಶ್ರೀಗಳು ದೇವಿಯ ದೇವಸ್ಥಾನವನ್ನು ಕಿತ್ತು ಹಾಕಿದ್ದು , ಮತ್ತು ಮದಕರಿ ನಾಯಕರನ್ನು ಕೊಂದ ಟಿಪುö್ಪ ಸುಲ್ತಾನ್ ರವರ ಮೂರ್ತಿಯನ್ನು ಮಾಡಿಟ್ಟಿದ್ದು , ಮದಕರಿ ನಾಯಕರಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.ಮದಕರಿನಾಯಕರು ತನ್ನ ಆಡಳಿತ ಅವಧಿಯಲ್ಲಿ ಮಾಡಿದ ಸ್ಥಿರ ಮತ್ತು ಚರಾಸ್ತಿ ಸಂಪೂರ್ಣವಾಗಿ ಮುರುಘಾಮಠದ ಸ್ವಾಧೀನದಲ್ಲಿದ್ದು, ಮದಕರಿನಾಯಕರ ವಾಲ್ಮೀಕಿ ನಾಯಕ ಸಮುದಾಯವನ್ನು ಕಡೆಗಣಿಸಿರುತ್ತಾರೆ. ಒಂದು ದಾವಣಗೆರೆ ಶೋಷಿತ ವರ್ಗಕ್ಕೆ ಸ್ವಾಮೀಜಿಗಳನ್ನು ಕೊಟ್ಟು, ಆ ಸಮುದಾಯಗಳನ್ನು ಸ್ವಾಮೀಜಿಗಳ ಮೂಲಕ ಹಿಡಿತವನ್ನು ಸಾಧಿಸಿರುತ್ತಾರೆ. ಸಮಾಜದಲ್ಲಿ ಮೇಲ್ಕಂಡ ವಿಷಯವಾಗಿ ಪ್ರಶ್ನೆ ಮಾಡದಂತೆ ಭಾರ ಹಾಕಿರುತ್ತಾರೆ. ಸದರಿ ಸ್ವಾಮೀಜಿಗಳು ಮುರುಘಾಮಠದ ಅಧೀನಕ್ಕೆ ಒಳಪಟ್ಟು ಕಾರ್ಯನಿರ್ವಹಿಸಿ ಶೋಷಿತ ವರ್ಗದ ಜನಾಂಗಕ್ಕೆ ಕುರಿ, ಕೋಣ ಕಡಿದು ಹಬ್ಬ ಮಾಡದಂತೆ ಯಾವ ಸ್ವಾಮೀಜಿಯು ಸಹಾ ಹೇಳಲಿಲ್ಲ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ಮಾರ್ಗದರ್ಶನ ನೀಡಲಿಲ್ಲ ಎಂದು ದೂರಿದರು. ಮುರುಘಾಶ್ರೀಗಳು ಅಮಾವಸ್ಯೆ ದಿನ ಮದುವೆ ಕಾರ್ಯಗಳನ್ನು ಮಾಡಿದ್ದು ತುಳಿತಕ್ಕೀಡಾದ ಜನಾಂಗದವರಿಗೆ ಮಾತ್ರವೇ ಹೊರತು ಇದುವರೆಗೂ ಮೇಲ್ವರ್ಗದ ಯಾವುದೇ ಒಬ್ಬ ವ್ಯಕ್ತಿಯು ಸಹ ಮದುವೆ ಮಾಡಿಕೊಂಡಿರುವುದಿಲ್ಲ. ಸ್ಮಶಾನದಲ್ಲಿ ಕಾರ್ಯಕ್ರಮ ನಡೆಸುವುದು ಸೈಂಟಿಫಿಕ್ ಆಗಿ ಜೀವಿತ ಮನುಷ್ಯರಿಗೆ ಅನಾರೋಗ್ಯಕ್ಕೆ ಕಾರಣ. ಸತ್ತ ಮನುಷ್ಯನ ಬಾಡಿಯಿಂದ ವೈರಸ್‌ಗಳು ಡಿಸ್ಪೋಸ್ ಆಗಿ ಬದುಕಿರುವ ಮನುಷ್ಯನಿಗೆ ಅನಾರೋಗ್ಯಕ್ಕೆ ಕಾರಣವಾಗಿರುತ್ತದೆ. ಈ ಎಲ್ಲಾ ಕಾರ್ಯಗಳು ದಲಿತರ ಮೇಲೆ ಪ್ರಯೋಗವಾಗಿವೆ. ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿರುತ್ತಾರೆ ಎಂದು ಆರೋಪ ಮಾಡಿದರು. ದಲಿತ ಮಕ್ಕಳ ಮೇಲೆ ಅತ್ಯಾಚಾರದ ಆರೋಪ ಹೊತ್ತು ಜೈಲಿನಲ್ಲಿದ್ದಾರೆ. ಕಾರ್ಯಗಳನ್ನು ಮುಂದುವರೆಸುತ್ತೇವೆAದು ಈಗಿನ ಆಡಳಿತ ಮಂಡಳಿ ಹೇಳಿದೆ. ಸ್ವಾಮೀಜಿಗಳು ದಲಿತ ವರ್ಗದ ಜನಾಂಗವನ್ನು ಹಿಡಿತದಲ್ಲಿಟ್ಟುಕೊಳ್ಳಲು ಹೊಡೆದಾಡುವ ನೀತಿಯನ್ನು ಅನುಸರಿಸುತ್ತಿದೆ. ಮಾಯಕೊಂಡದಲ್ಲಿ ಹಿರಿಯ ಮದಕರಿನಾಯಕರ ಸಮಾಧಿ ಒತ್ತುವರಿಯಾಗಿದ್ದು, ಅದರ ಪಕ್ಕ ನೂರಾರು ಎಕರೆ ಮದಕರಿ ಕಾಯಕರ ಆಸ್ತಿ ಇದ್ದು, ಸದರಿ ಆಸ್ತಿಯನ್ನು ಸಾಹುಕಾರ ತಿಪ್ಪಣ್ಣ ಎನ್ನುವವರಿಗೆ ೫೦ ಎಕರೆ ಜಮೀನು ಮಾರಾಟ ಮಾಡಿದ್ದು, ಉಳಿದ ಜಮೀನುಗಳನ್ನು ಒಂದೇ ಜನಾಂಗಕ್ಕೆ ಮುರುಘಾಶರಣರು ಕೊಟ್ಟಿರುತ್ತಾರೆ. ಮದಕರಿ ನಾಯಕರ ಅಸ್ತಿ ಒಂದು ಸಮುದಾಯಕ್ಕೆ ಮಾತ್ರ ಹಂಚಿಕೆಯಾಗಿರುತ್ತದೆ.ಮದಕರಿನಾಯಕರು ಲೋಕಕಲ್ಯಾಣಕ್ಕಾಗಿ ಕೊಟ್ಟ ಆಸ್ತಿ ಮುರುಘಾಮಠ ದುರುಪಯೋಗ ಪಡಿಸಿಕೊಂಡಿದ್ದು, ದಲಿತರಿಂದ ಪಡೆದ ಆಸ್ತಿ ದಲಿತ ಮಕ್ಕಳ ಮೇಲೆ ಅತ್ಯಾಚಾರವಾಗಿ ಜೈಲು ಸೇರಿದ್ದು ಎಂಬ ಆಪಾದನೆ ಹೊತ್ತಿದ್ದು, ಮದಕರಿ ನಾಯಕರನ್ನು ಕೊಂದ ಟಿಪುö್ಪ ಸುಲ್ತಾನ್ ಮೂರ್ತಿ ಇಟ್ಟು ಮಠಕ್ಕೆ ಸೇವೆ ಮಾಡಿದ ಭಕ್ತ ಮದಕರಿನಾಯಕರ ಮೂರ್ತಿ ಮಾಡದೇ ಅವಮಾನ ಮಾಡಿರುತ್ತಾರೆ. ಮದಕರಿನಾಯಕರ ಸ್ಥಿರ ಸ್ವತ್ತು ಒಂದು ಜಾತಿ ಮೇಲ್ವರ್ಗದ ಜನ ಹಿಡಿತವನ್ನು ಸಾಧಿಸಿರುತ್ತಾರೆ ಮತ್ತು ಸ್ವಾಧೀನ ಹೊಂದಿರುತ್ತಾರೆ. ಈ ಕಾರಣವಾಗಿ ಸದರಿ ಷೆಡ್ಯೂಲ್ ಸ್ವತ್ತನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು. ದಲಿತ ವರ್ಗದ ಸಮುದಾಯಗಳು ಯಾವುದೇ ಕಾರಣದಿಂದಲೂ ಆ ಮಠದಲ್ಲಿ ಹೋಗಬಾರದು. ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರೇಮ ಜಾಧವ್ ಶಿರಮಗೊಂಡನಹಳ್ಳಿ, ವಕೀಲ ಅಶೋಕ್ ಕೊಲ್ಲಾಪುರ, ಪ್ರಕಾಶ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಕರ್ನಾಟಕ ಏಕತಾವೇದಿಕೆ ರಾಜ್ಯಾಧ್ಯಕ್ಷ ಹಾಲೇಶ್, ಎನ್.ಹೆಚ್. ಹಾಲೇಶ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.