ಲೋಕ ಅದಾಲತ್‌ನಲ್ಲಿ 5,315 ಪ್ರಕರಣಗಳು ಇತ್ಯರ್ಥ

ಯಾದಗಿರಿ : ನ.21 : ಯಾದಗಿರಿ ಜಿಲ್ಲೆಯಾದ್ಯಂತ ನ.12 ರಂದು ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ಸುಮಾರು 5,315 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡು 5.40 ಕೋಟಿ ರೂ.ವಸೂಲಿ ಆಗಿದೆ.
ಯಾದಗಿರಿ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ 442, ಶಹಾಪೂರ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ 340, ಸುರಪುರ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ 1331, ಯಾದಗಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ 282, ಸುರಪುರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 703, ಸುರಪುರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 749, ಒಂದನೇ ಅಧಿಕ ನ್ಯಾಯಾಲಯ ಯಾದಗಿರಿಯಲ್ಲಿ 314, ಒಂದನೇ ಅಧಿಕ ನ್ಯಾಯಾಲಯ ಶಹಾಪೂರದಲ್ಲಿ 387, ಒಂದನೇ ಅಧಿಕ ನ್ಯಾಯಾಲಯ ಸುರಪುರದಲ್ಲಿ 972, ಪ್ರಕರಣಗಳು ಇತ್ಯರ್ಥವಾಯಿತು, ಒಟ್ಟು 10 ಪೀಠಗಳನ್ನು ಮಾಡಲಾಗಿತ್ತು. ರಾಷ್ಟಿçÃಯ ಲೋಕ ಅದಾಲತ್ ನ್ಯಾಯಾಲಯದಲ್ಲಿ 4 ಪ್ರಕರಣಗಳಲ್ಲಿ ವಿವಾಹ ವಿಚ್ಛೇದನಕ್ಕಾಗಿ ಮಾಡಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಒಂದಾಗಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ನಂದಕುಮಾರ ಅವರು ತಿಳಿಸಿದ್ದಾರೆ.
ಮುಖ್ಯವಾಗಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಬಿ.ನಂದಕುಮಾರರವರು ಎಲ್ಲಾ ನ್ಯಾಯಾಧೀಶರಿಗೆ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಲು ನಿರ್ದೇಶನ ಸಲಹೆ ಮತ್ತು ಅವರ ತಂತ್ರದAತೆ ಜಿಲ್ಲಾದ್ಯಂತ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾ ವಿಚ್ಛೇದನ ಕೋರಿದ್ದ ಸತಿ-ಪತಿಗಳನ್ನು ಮನವೋಲಿಸುವ ಪ್ರಯತ್ನ ನಡೆಸಿ ನಾಲ್ಕು ಜೋಡಿಗಳನ್ನು ಒಂದು ಮಾಡಲು ಯಶಸ್ವಿಯಾದರು.
ಜಿಲ್ಲಾ ನ್ಯಾಯಾಧೀಶರ ನಿರ್ದೇಶನ, ಸಲಹೆ ಮತ್ತು ತರಬೇತಿಯಂತೆ ಜಿಲ್ಲಾದ್ಯಾಂತ ನ್ಯಾಯಾಧೀಶರು ಒಟ್ಟಾರೆ 49 ಆಸ್ತಿಯಲ್ಲಿ ಪಾಲಿಗಾಗಿ ಹಾಕಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ನ್ಯಾಯಾಧೀಶರು ಇತ್ಯರ್ಥ ಪಡಿಸಿದರು. ಅದರಂತೆ ಸುಮಾರು 26 ವಾಹನ ಅಪಘಾತದ ಪ್ರಕರಣಗಳು ಇತ್ಯರ್ಥವಾದವು. ಬ್ಯಾಂಕ್ ಪ್ರಕರಣಗಳು 6, ಸಲ ವಸುಲಿಗಾಗಿ ಹಾಕಿದ ಪ್ರಕರಣಗಳು 4 ಸ್ಪೆಷಫಿಕ್ ಪರ್ಫಾರ್ಮೆನ್ಸ್ ಕೇಸ್ 15, ಜನನ ಮತ್ತು ಮರಣ 1325, ಹಾಗೂ ಇತರ ಪ್ರಕರಣಗಳು ಜಿಲ್ಲಾದ್ಯಂತ ಇತ್ಯರ್ಥಗೊಂಡವು.
ಜಿಲ್ಲಾ ನ್ಯಾಯಾಧೀಶರಾದ ಶ್ರೀ ಬಿ.ನಂದಕುಮಾರ ಅವರು ಈ ಲೋಕ ಅದಾಲತ್‌ದಲ್ಲಿ ಮೊದಲು ಸುಮಾರು ಸಭೆಯನ್ನು ಮಾಡಿ ವಕೀಲರಿಗೆ, ಬ್ಯಾಂಕಿನ ಮ್ಯಾನೇಜರ ರವರಿಗೆ, ಇನ್ಸುರೇನ್ಸ್ ಪ್ಯಾನೇಲ್ ಲಾಯರ್ಸ್ ಮತ್ತು ಇತರ ಇಲಾಖೆಯೊಂದಿಗೆ ಸಭೆ ಮಾಡಿ ಅವರಿಗೆ ರಾಜಿ ಮಾಡಲು ಸಲಹೆ ಮತ್ತು ಮಾರ್ಗದರ್ಶ ನೀಡಿ ರಾಜಿ ಮಾಡಲು ಬಹಳಷ್ಟು ಪ್ರಯತ್ನ ಪಟ್ಟರು. ಅವರ ನಿರ್ದೇಶನದಂತೆ ಎಲ್ಲಾ ನ್ಯಾಯಾಧೀಶರು ಕಠಿಣ ಪ್ರಯತ್ನದಿಂದ 5315 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ವಿವಿಧ ರೀತಿಯ ಹಾಗೂ ವಿವಿಧ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಸುಮಾರು ಹಾಗೂ 1,362 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸೇರಿ ಒಟ್ಟು 6,677 ರಾಜೀ ಸಂಧಾನ ಮೂಲಕ ಇತ್ಯರ್ಥಗೊಂಡಿವೆ. ಇವುಗಳಲ್ಲಿ 240 ವಿಭಾಗದ ದಾವೆಗಳು, 33ಚೆಕ್ ಬೌನ್ಸ್ ಪ್ರಕರಣಗಳು ಸೇರಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಾಹೀಲ್ ಅಹ್ಮದ್ ಎಸ್.ಕುನ್ನಿಭಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.