ಲೋಕ್ ಅದಾಲತ್‍ನಲ್ಲಿ 16,305 ಪ್ರಕರಣಗಳು ಇತ್ಯರ್ಥ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.14:- ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಪ್ರಕರಣ ಇತ್ಯರ್ಥವಾಗಬೇಕು ಎಂಬ ಸದುದ್ದೇಶದಿಂದ ಕಳೆದ ಸೆಪ್ಟೆಂಬರ್ 9ರಂದು ನಡೆದ ಮೆಗಾ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ ಒಟ್ಟು 16,305 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾ ನ್ಯಾಯಾಧೀಶರು ಜಿಲ್ಲೆಯಲ್ಲಿ ನಡೆದ ಮೆಗಾ ಲೋಕ್‍ಅದಾಲತ್ ನಲ್ಲಿ 2,431 ನ್ಯಾಯಾಲಯದ ಪ್ರಕರಣಗಳು ಹಾಗೂ 13604 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿಒಟ್ಟಾರೆ 16,035 ಪ್ರಕರಣಗಳು ಬಗೆಹರಿದಿವೆ. ಒಟ್ಟು 7,72,18,992 ರೂ. ನಷ್ಟು ದಂಡ ವಸೂಲಿ, ಪರಿಹಾರ, ವಿಮೆ ಮೌಲ್ಯ ಒಳಗೊಂಡಿದೆ ಎಂದರು.
ಚಾಮರಾಜನಗರ ತಾಲೂಕಿನಲ್ಲಿ 804 ನ್ಯಾಯಾಲಯದ ಪ್ರಕರಣಗಳು, 7,654 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿಒಟ್ಟು 8,458 ಪ್ರಕರಣಗಳು ಇತ್ಯರ್ಥಗೊಂಡಿವೆ. ಯಳಂದೂರು ತಾಲೂಕಿನಲ್ಲಿ 236 ನ್ಯಾಯಾಲಯದ ಪ್ರಕರಣಗಳು, 858 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿಒಟ್ಟು 1,094 ಪ್ರಕರಣಗಳು ಇತ್ಯರ್ಥಗೊಂಡಿವೆ. ಕೊಳ್ಳೇಗಾಲ ತಾಲೂಕಿನಲ್ಲಿ 1,148 ನ್ಯಾಯಾಲಯದ ಪ್ರಕರಣಗಳು, 3,732 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿಒಟ್ಟು 4,880 ಪ್ರಕರಣಗಳು ಇತ್ಯರ್ಥಗೊಂಡಿವೆ. ಗುಂಡ್ಲುಪೇಟೆತಾಲೂಕಿನಲ್ಲಿ 243 ನ್ಯಾಯಾಲಯದ ಪ್ರಕರಣಗಳು, 1,360 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿಒಟ್ಟು 1,603 ಪ್ರಕರಣಗಳು ಇತ್ಯರ್ಥಗೊಂಡಿವೆಎಂದು ತಿಳಿಸಿದರು.
ಲೋಕ್ ಅದಾಲತ್ ನಲ್ಲಿ 20 ವರ್ಷಕ್ಕೂ ಹೆಚ್ಚಿನ ಲಿಟಿಗೇಶನ್ ಪ್ರಕರಣವೊಂದುರಾಜಿಯಿಂದ ಬಗೆ ಹರಿದಿದೆ. ಅಲ್ಲದೇದಾಂಪತ್ಯ ಕಲಹದ 3 ವ್ಯಾಜ್ಯ ಪೂರ್ವ ಪ್ರಕರಣಗಳು ಸಹ ಇತ್ಯರ್ಥವಾಗಿದೆ.
ಇದರಲ್ಲಿ ಚಾಮರಾಜನಗರದಲ್ಲಿ 2, ಕೊಳ್ಳೇಗಾಲದ 1 ಪ್ರಕರಣ ಸೇರಿವೆ. ಈ ಎಲ್ಲಾ ಪ್ರಕರಣಗಳು ಒಮ್ಮತದಿಂದ ತೀರ್ಮಾನವಾಗಿರುವುದು ಲೋಕ್ ಅದಾಲತ್ ನ ವಿಶೇಷ ಎನಿಸಿದೆ ಎಂದರು.
ಕಳೆದ ಜುಲೈ 8ರಂದು ನಡೆದ ಲೋಕ್ ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಗಳಿಗಿಂತ ಸೆಪ್ಟೆಂಬರ್ 9ರಂದು ನಡೆದ ಅದಾಲತ್‍ನಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ನ್ಯಾಯಾಲಂiÀiಗಳ ಮೇಲಿನ ಪ್ರಕರಣಗಳ ಹೊರೆತಗ್ಗಿದೆ. ಲೋಕ್ ಅದಾಲತ್ ಯಶಸ್ಸಿಗೆ ಶ್ರಮಿಸಿದ ಎಲ್ಲಾ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಕಂದಾಯ, ಅಬಕಾರಿ, ಕಾರ್ಮಿಕ ಇಲಾಖೆ, ಆಹಾರಇಲಾಖೆ, ಇತರ ಇಲಾಖೆಗಳು ಮಾಧ್ಯಮ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿಜಿಲ್ಲಾ ನ್ಯಾಯಾಧೀಶರಾದಬಿ.ಎಸ್. ಭಾರತಿಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.