ಲೋಕ್ ಅದಾಲತ್‍ನಲ್ಲಿ 15,045 ಪ್ರಕರಣಗಳು ಇತ್ಯರ್ಥ

ಯಾದಗಿರಿ : ಸೆ. 13 : ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಲೋಕ್ ಅದಾಲತ್‍ನಲ್ಲಿ 15,045 ಪ್ರಕರಣಗಳು 2023ರ ಸೆಪ್ಟೆಂಬರ್ 9 ರಂದು ಜಿಲ್ಲೆಯಾದ್ಯಂತ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಸುಮಾರು 7,891 ಪ್ರಕರಣಗಳು ಬಾಕಿ ಇರುವ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡು 19,72 ಕೋಟಿ ರೂ. ವಸೂಲಿ ಆಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರವೀಂದ್ರ ಎಲ್.ಹೊನೋಲೆ ಅವರು ತಿಳಿಸಿದ್ದಾರೆ.

  ಯಾದಗಿರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 09, ಯಾದಗಿರಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 1131, ಶಹಾಪೂರ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 736, ಸುರಪುರ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 498, ಯಾದಗಿರಿಯ ಜೆ.ಎಮ್.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 959, ಶಹಾಪೂರ ಜೆ.ಎಮ್.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 987, ಸುರಪುರ ಜೆ.ಎಮ್.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 631, ಯಾದಗಿರಿಯ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 861, ಶಹಾಪೂರ ಹೆಚ್ಚುವರಿ, ಸಿವಿಲ್ ಮತ್ತು ಜೆ.ಎಮ್.ಎಫ್.ಸಿ  ನ್ಯಾಯಾಧೀಶರ ನ್ಯಾಯಾಲಯದಲ್ಲಿ 1073, ಸುರಪುರ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 1004, ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
 ಒಟ್ಟು 10 ಪೀಠಗಳ ರಚನೆ ಮಾಡಲಾಗಿತ್ತು, ರಾಷ್ಟ್ರೀಯ ಲೋಕ್ ಅದಾಲತ್ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಯನ್ನು ಜಿವನಾಂಶಕ್ಕಾಗಿ ಅರ್ಜಿಸಲ್ಲಿಸಿದ (1) ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಒಂದಾಗಿ ಬಾಳಲು ಒಪ್ಪಿಸಲಾಯಿತು.
 ಜಿಲ್ಲಾದ್ಯಂತ ಒಟ್ಟಾರೆ 01 ಹಣ ವಸೂಲಿ ದಾವೆ, 54 ವಿಭಾಗ ಹಕ್ಕುಗಳ ಪರಿಹಾರ ದಾವೆಗಳು (partition suits) 11 ನಿರ್ದಿಷ್ಟ ಹಕ್ಕುಗಳ ಪರಿಹಾರ ದಾವೆಗಳು  (specific performance))        03 ಅಂತಿಮ ಡಿಕ್ರಿ ಪ್ರಕರಣಗಳು (ಎಫ್‍ಡಿಪಿ), 39 ಇಪಿ (ಎಲ್‍ಎಸಿ, ಎಮ್‍ವಿಸಿ), 10 ಮೋಟಾರು ವಾಹನ ಅಪಘಾತ (ಎಮ್‍ವಿಸಿ), 10 ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿ (maintenance), 2 ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ (ಡಿ.ವಿ), 1989 ಜನನಕ್ಕೆ ಸಂಬಂಧಿಸಿದ ಪ್ರಕರಣಗಳ ಅರ್ಜಿ ಮತ್ತು 15 ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, 15 ಚೆಕ್ ಅಮಾನ್ಯ ಪ್ರಕರಣಗಳು, 5683 ಲಘು ಪ್ರಕರಣಗಳು, ಹಾಗೂ 59 ಇತರೆ ಅಪರಾಧಿಕ ಪ್ರಕರಣಗಳು ಜಿಲ್ಲಾದ್ಯಂತ ಇತ್ಯರ್ಥಗೊಂಡವು.

ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಆಗಬುದಾದ 7,891 ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು 7,154 (BSNL, Bank’s Revenue Matters) ಸೇರಿ ಒಟ್ಟು 15,045 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.