ಲೋಕೇಶ್ವರ್ ರಾಜಕೀಯ ಉನ್ನತಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ

ತಿಪಟೂರು, ಮಾ. ೪- ರಾಜ್ಯ ಖೋಖೋ ಸಂಸ್ಥೆಯ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಲೋಕೇಶ್ವರ್ ರವರ ರಾಜಕೀಯ ಉನ್ನತಿಗಾಗಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲೆಂದು ತಾಲ್ಲೂಕಿನ ಅಭಿಮಾನಿ ಬಳಗ ಹಾಗೂ ಹಳ್ಳಿಕಾರ್ ಸಾಮ್ರಾಜ್ಯ ಸಂಸ್ಥೆ ವತಿಯಿಂದ ಕಲ್ಲೇಶ್ವರ ದೇವಾಲಯದಲ್ಲಿ ರುದ್ರಹೋಮ, ಗಣಪತಿ ಹೋಮ ಮೂಲಕ ರುದ್ರಾಭಿಷೇಕ ನೆರವೇರಿಸಿ ನೂರಾರು ಕಾರ್ಯಕರ್ತರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಿಪಟೂರಿನಿಂದ ಪಾದಯಾತ್ರೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಹಳ್ಳಿಕಾರ್ ಸಾಮ್ರಾಜ್ಯ ಸಂಸ್ಥೆಯ ಮುಖ್ಯಸ್ಥ ವಿನಯ್ ಮಡೆನೂರು, ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್, ಬಸವರಾಜು, ಕಾರ್ಯಕರ್ತರಾದ ರಾಜಶೇಖರ್, ಭಾರತಿ ಮಂಜುನಾಥ್, ರೇಣು, ಕೆಈಬಿ ತೋಂಟಾರಾಧ್ಯ, ಪೃಥ್ವಿ, ಪುನಿತ್, ವಾಟರ್ ಮಂಜು, ತಿಮ್ಮೆಗೌಡ ಬೊಮ್ಮಲಾಪುರ, ನಾಗರಾಜು, ವಿಜಯ್, ಪ್ರಕಾಶ್, ಬೆಳಗರಹಳ್ಳಿ ಕಾಂತರಾಜು, ಸೃಜಯ್, ನಿಜಗುಣ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.