ಲೋಕಿಕೆರೆ ವಾಲ್ಮೀಕಿ ಸಮುದಾಯ ಭವನ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

ದಾವಣಗೆರೆ.ಜೂ.೨೦: ಕಳೆದ ಒಂದೂವರೆ ವರ್ಷದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ ಶ್ರೀಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಪೂರ್ಣಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲೋಕಿಕೆರೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯ ಭವನ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಕಳೆದ ಒಂದೂವರೆ ವರ್ಷ ಕಳೆದಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಾಲ್ಮೀಕಿ ಸಮುದಾಯವರು ಶಾಸಕರಿಗೆ ಅಹವಾಲು ಸಲ್ಲಿಸಿದರು. ಈ ವೇಳೆ ಶಾಸಕ ಕೆ.ಎಸ್.ಬಸವಂತಪ್ಪ, ಸಂಬAಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಅರ್ಧಕ್ಕೆ ನಿಂತ ವಾಲ್ಮೀಕಿ ಸಮುದಾಯ ಭವನ ಕಟ್ಟಡ ಕಾಮಗಾರಿಯನ್ನೂ ಕೂಡಲೇ ಆರಂಭಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.ಶ್ಯಾಗಲೆ, ಕಂದಗಲ್ಲು ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಶಾಸಕ ಕೆ.ಎಸ್.ಬಸವಂತಪ್ಪ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.ಈ ಸಂದರ್ಭದಲ್ಲಿ ಲೋಕಿಕೆರೆ ಗ್ರಾಪಂ ಅಧ್ಯಕ್ಷೆ ಸುಧಾ ಅಂಜಿನಪ್ಪ, ಸದಸ್ಯರಾದ ಉಮ್ಮಣ್ಣ, ರವಿಕುಮಾರ್, ಅಭಿಷೇಕ, ಮಾಜಿ ತಾಪಂ ಸದಸ್ಯ ಹುಲಿಕಟ್ಟೆ ಶಿವಣ್ಣ, ಟಿ.ವಿ.ಮೂರ್ತಣ್ಣ, ನಿರಂಜಮೂರ್ತಿ, ಮುತ್ತಣ್ಣ, ಪಿಡಿಒ ಹಾಗೂ ಶ್ಯಾಗಲೆ ಗ್ರಾಪಂ ಅಧ್ಯಕ್ಷರು, ಧನ್ಯಾಕುಮಾರ್, ಬಾಬಣ್ಣ, ಎಸ್.ಎಂ.ರುದ್ರಪ್ಪ, ಶಿವಣ್ಣ, ಹನುಮಂತಪ್ಪ, ಸತೀಶ್, ಕಂದಗಲ್ಲು ಮಲ್ಲಿಕಾರ್ಜುನಗೌಡ್ರು, ಹಾಲೇಶಪ್ಪ, ಏಳುಕೋಟಿ ಗಂಗಜ್ಜ, ಚಂದ್ರಪ್ಪ, ಮಂಜಣ್ಣ ಸೇರಿದಂತೆ ಇತರರಿದ್ದರು.