ಲೋಕಿಕೆರೆಯಲ್ಲಿ ನಾಲ್ಕು ಬಣವೆ ಭಸ್ಮ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ. 9 :-  ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದಾಗಿ ನಾಲ್ಕು ಕಣಗಳಲ್ಲಿದ್ದ ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿರುವ  ಘಟನೆ ಬುಧವಾರ ತಾಲೂಕಿನ ಲೋಕೀಕೆರೆಯಲ್ಲಿ ನಡೆದಿದೆ.
ಆಕಸ್ಮಿಕವಾಗಿ ತಗುಲಿದ ಬೆಂಕಿ  ಗ್ರಾಮದಲ್ಲಿನ ನಾಲ್ಕು ಕಾಣಗಳಿಗೆ ಬೆಂಕಿ ವ್ಯಾಪಿಸಿದೆ, ಕೂಡಲೇ ಬೆಂಕಿ ನಂದಿಸಲು ಹೋದ ಯುವಕ ಉಮೇಶ್ ಎಂಬುವವನಿಗೆ ಸುಟ್ಟ ಗಾಯಗಳಾಗಿದ್ದು, ಆತನನ್ನು ಚಿತ್ರದುರ್ಗದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಬಸವರಾಜ ಎಂಬುವವರ ದನದ ಕೊಟ್ಟಿಗೆ ಹಾಗೂ ಅದರಲ್ಲಿದ್ದ 10 ಚೀಲ ಜೋಳ, ನಾಲ್ಕು ತಾಡಪಾಲ್, ಟೈರ್ ಗಾಡಿಯೂ ಸುಟ್ಟು ಕರಕಲಾಗಿದೆ.
ಗ್ರಾಮದ ಬಸವರಾಜಪ್ಪ, ತಿಪ್ಪೇಸ್ವಾಮಿ ರೆಡ್ಡಿ, ಕೊಟ್ರಮ್ಮ, ಕೃಷ್ಣಾ ರೆಡ್ಡಿ, ಹನುಮಂತಪ್ಪ, ಪಾಲಪ್ಪ, ಎಂ.ಬಿ.ಜಗದೀಶ್, ಗಿಡ್ಡರ ನಾಗಪ್ಪ, ಅಂಜಿನಪ್ಪ ಎಂಬುವವರಿಗೆ ಸೇರಿದ ಮೇವಿನ ಬಣವೆಗಳು
ಐದು ಹುಣಸೆ ಮರ, 89 ಗಾಡಿ ಶೇಂಗಾ ಮೇವು, 48 ಗಾಡಿ ಜೋಳದ ಸೊಪ್ಪೆ, 25 ಗಾಡಿ ರಾಗಿ ಹುಲ್ಲು, 35 ಗಾಡಿ ಮೆಕ್ಕೆಜೋಳದ ಸೊಪ್ಪೆ ಹಾಗೂ 8 ಗಾಡಿ ಹುರುಳಿ ಹುಲ್ಲು ಭಸ್ಮವಾಗಿದ್ದು  2.50 ಲಕ್ಷ ರೂ ಗೂ ಹೆಚ್ಚು ಸುಟ್ಟು  ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಕೂಡ್ಲಿಗಿ, ಜಗಳೂರಿನ ಎರಡು ಅಗ್ನಿಶಾಮಕ ದಳದ ವಾಹನಗಳು ಹಾಗೂ ಸ್ಥಳೀಯರೊಂದಿಗೆ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮಲೆಕ್ಕಾಧಿಕಾರಿ ಚನ್ನಬಸಯ್ಯ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳ ಆರಂಭಿಸಿ : ಅಗ್ನಿ ಅನಾಹುತಗಳು ಸಂಭವಿಸಿದ ತಕ್ಷಣ ಕೂಡ್ಲಿಗಿ , ಕೊಟ್ಟೂರು ಅಥವಾ ಜಗಳೂರಿನಿಂದ 35 ರಿಂದ 40 ಕಿ.ಮೀ ದೂರದಿಂದ ಅಗ್ನಿಶಾಮಕ ದಳದವರು ಬರಬೇಕಿದೆ ಅವು ಬರುವಷ್ಟರಲ್ಲಿ ಬೆಂಕಿ ಆವರಿಸಿ ಅಪಾರ ನಷ್ಟ ಸಂಭವಿಸುವ ಕಾರಣ ಪಟ್ಟಣದಂತೆ ಬೆಳೆಯುತ್ತಿರುವ ತಾಲೂಕಿನ  ಕಾನಹೊಸಹಳ್ಳಿಯಲ್ಲಿ ಒಂದು  ಅಗ್ನಿ ಶಾಮಕ ಠಾಣೆ ತೆರೆಯಬೇಕಿದೆ ಇದರಿಂದ ತಾಲೂಕಿನ ಗಡಿಭಾಗವಾದ ಕಲ್ಲಹಳ್ಳಿ, ಹುಡೇ0, ಭಾಗದ ಜನತೆಗೂ ಅನುಕೂಲವಾಗುವ ಜೊತೆಗೆ ನಷ್ಟದ ಪ್ರಮಾಣ ಸಹ ಕಡಿಮೆಯಾಗಲಿದೆ ಎಂದು ಕಾನಹೊಸಹಳ್ಳಿ ಭಾಗದ ಸಾರ್ವಜನಿಕರು ಒತ್ತಾಯವಾಗಿದೆ.

One attachment • Scanned by Gmail