ಲೋಕಾರ್ಪಣೆ ಸಮಾರಂಭ


ಧಾರವಾಡ,ಜ.21: :ಕನ್ನಡ ನಾಡು, ನುಡಿಗೆಅಪಾರವಾದಕೊಡುಗೆಯನ್ನು ನೀಡಿದಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕಏಕೀಕರಣಕ್ಕಾಗಿ ಹೋರಾಟದ ಮೂಲ ಬುನಾದಿಯನ್ನು ಹಾಕಿಕೊಟ್ಟಿದೆ. ಇಡೀಕರ್ನಾಟಕಕ್ಕೆಇದೊಂದು ಮಾದರಿಯ ಸಂಘವಾಗಿದ್ದು, ಇದಕ್ಕೆಇದರದೇಆದ ಮೌಲಿಕ ಪರಂಪರೆಇರುವುದನ್ನುಕಾಣುತ್ತೇವೆ. ಈಗ ಮತ್ತೊಂದುದಾಖಲೆಅನ್ನುವರೀತಿಯಲ್ಲಿಕನ್ನಡ ದಿನದರ್ಶಿಕೆಯನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಮಾಜಿ ಮುಖ್ಯಮಂತ್ರಿಜಗದೀಶ ಶೆಟ್ಟರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಅಯೋಜಿಸಿದ್ದ ಕನ್ನಡಗುಡಿಯಕನ್ನಡದ ಅಂಕಿಗಳುಳ್ಳ ದಿನದರ್ಶಿಕೆ-2024ರ ಲೋಕಾರ್ಪಣೆ ಸಮಾರಂಭದಲ್ಲಿ ದಿನದರ್ಶಿಕೆ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ದಿನದರ್ಶಿಕೆಯಲ್ಲಿರುವ ಕನ್ನಡ ಅಂಕಿಗಳನ್ನು ಕಂಡಕೂಡಲೇ ನನಗೆ ಬಾಲ್ಯದ ನೆನಪು ಮರುಕಳಿಸಿತು.ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೆಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.ಕನ್ನಡ ಭಾಷೆ ಉಳಿಯಬೇಕು, ಕನ್ನಡ ಅಂಕಿಗಳು ಮತ್ತೆತಮ್ಮಗತವೈಭವವನ್ನು ಮರಳಿ ಪಡೆಯುವಂತಾಗಬೇಕುಎಂದಜಗದೀಶ ಶೆಟ್ಟರಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನನ್ನಿಂದ ಸಹಾಯ-ಸಹಕಾರ ಸರಕಾರದ ಮಟ್ಟದಲ್ಲಿದೊರಕುವ ಹಾಗೆ ಪ್ರಯತ್ನವನ್ನು ಮಾಡುತ್ತೇನೆಎಂದರು.
ಸಮಾರಂಭದಅಧ್ಯಕ್ಷತೆಯನ್ನು ವಹಿಸಿದ್ದ ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿಯವರು ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರಅವರು ಸಂಘಕ್ಕೆ ಆಗಮಿಸಿ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದ್ದು ಸಂತೋಷವನ್ನುಂಟು ಮಾಡಿದೆ.ತಾವು ಸಂಘದ ಕಾರ್ಯಕ್ರಮಗಳಿಗೆ ಮಾರ್ಗದರ್ಶಿಸಬೇಕು.ತಮ್ಮಂತವರು ಸಂಘಕ್ಕೆ ಮೇಲಿಂದ ಮೇಲೆ ಬರುವ ಮೂಲಕ ಆಡಳಿತ ಮಂಡಳಿಗೆ ಕನ್ನಡದಕಾರ್ಯ ಮಾಡಲು ಪ್ರೋತ್ಸಾಹ ಸಿಗುವುದು ತಾವು ಸಂಘಕ್ಕೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ನಮಗೆ ಒದಗಿಸಿಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಂಕರ ಹಲಗತ್ತಿ ಸ್ವಾಗತಿಸಿದರು.ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಡಾ.ಮಹೇಶ ಹೊರಕೇರಿ ವಂದಿಸಿದರು.ದಿನದರ್ಶಿಕೆಯನ್ನು ವಿನ್ಯಾಸಗೊಳಿಸಿದ ಬಿ.ಮಾರುತಿ ಹಾಗೂ ದೀಪಕ ಅವರಿಗೆ ಪುಷ್ಪ ನೀಡಿಗೌರವಿಸಲಾಯಿತು. ಸಮಾರಂಭದಲ್ಲಿ
ಸಮಾರಂಭದಲ್ಲಿ ಸತೀಶತುರಮರಿ, ಡಾ.ಸಂಜೀವಕುಲಕರ್ಣಿ, ಡಾ.ಶೈಲಜಾಅಮರಶೆಟ್ಟಿ, ವೀರಣ್ಣಒಡ್ಡೀನ, ಡಾ.ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಸಿ.ಯು. ಬೆಳ್ಳಕ್ಕಿ, ನಿಂಗಣ್ಣಕುಂಟಿ, ಶಿವಾನಂದ ಭಾವಿಕಟ್ಟಿ, ಎಂ.ಎಂ.ಚಿಕ್ಕಮಠ, ಸೇತುರಾಮ ಹುನಗುಂದ, ಕೆ.ಜಿ.ದೇವರಮನಿ, ಎಸ್.ಎಚ್.ಮಿಟ್ಟಲಕೋಡ, ಶ್ರೀನಿವಾಸ ವಾಡಪ್ಪಿ, ರಾಮಚಂದ್ರಧೋಂಗಡೆ, ಬಿ.ಆಯ್.ಈಳಿಗೇರ, ಯು.ಎಸ್. ಕುನ್ನಿಭಾವಿ, ಶರಣಪ್ಪ ಮೆಣಸಿನಕಾಯಿ, ತನುಜಾರೋಖಡೆ, ಶ್ವೇತಾಅರಗಂಜಿ ಸೇರಿದಂತೆ ಮುಂತಾದವರಿದ್ದರು.