
ಕಲಬುರಗಿ,ಮೇ.23-ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಸೈಬರ್, ಎಕನಾಮಿಕ್ಸ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆ (ಸೆನ್ ಪೆÇಲೀಸ್ ಠಾಣೆ)ಯ ಕಾನ್ಸ್‍ಟೇಬಲ್ ಮುಕ್ಕಲಪ್ಪ ನಿಲಜೇರಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
13 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು 7 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸೆನ್ ಪೆÇಲೀಸ್ ಠಾಣೆಯಲ್ಲಿ ಸಂಜನಾ ಬೀರಪ್ಪಾ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಕ್ಕಲಪ್ಪ. ಅರ್ಜಿ ತನಿಖೆಯಲ್ಲಿ ದೂರುದಾರರ ಹೆಸರು ಕೈ ಬಿಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಈ ವೇಳೆ ಲೋಕಾಯುಕ್ತ ಎಸ್.ಪಿ ಎ.ಆರ್. ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಿ ಲಂಚ ಸ್ವಿಕರಿಸುತ್ತಿದ್ದ ಕಾನ್ಸಟೇಬಲ್ ಮುಕ್ಕಲಪ್ಪನನ್ನು ಬಂಧಿಸಲಾಗಿದೆ.