ಲೋಕಾಯುಕ್ತ ಬಲೆಗೆ ಅಳಂದ ತಹಶೀಲ್ದಾರ

ಕಲಬುರಗಿ,ಸ 1: ಜಮೀನು ಪರಿವರ್ತನೆಗಾಗಿ ತಕರಾರು ರಹಿತ ಪ್ರಮಾಣಪತ್ರ ನೀಡಲು ಲಂಚ ಪಡೆಯುತ್ತಿದ್ದ ಅಳಂದ ತಹಸೀಲ್ದಾರ ಮತ್ತು ಕಂದಾಯ ನಿರೀಕ್ಷಕ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಹಸೀಲ್ದಾರ ಯಲ್ಲಪ್ಪ ಸುಬೇದಾರ ಮತ್ತು ಕಂದಾಯ ನಿರೀಕ್ಷಕ ರಾಜಶೇಖರ ಸರಸಂಬಿಕರ್ ಲೋಕಾಯುಕ್ತ ಬಲೆಗೆ ಸಿಕ್ಕು ಬಿದ್ದವರು.
ಮೆಹಬೂಬ ಪಟೇಲ್ ಎಂಬುವರು ಕೃಷಿ ಜಮೀನನ್ನು ಎನ್‍ಎ ಆಗಿ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದರು.ಅದಕ್ಕೆ ಎನ್‍ಒಸಿ ನೀಡಲು ಹಣದ ಬೇಡಿಕೆ ಇಟ್ಟಿದ್ದರು.ಈ ಹಿನ್ನೆಲೆಯಲ್ಲಿ ಪಟೇಲ್ ಲೋಕಾಯುಕ್ತರಿಗೆ ದೂರು ನೀಡಿದ್ದರು.ಗುರುವಾರ ಅಳಂದ ತಹಸೀಲ್ ಕಚೇರಿಯಲ್ಲೇ 12 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಇನ್‍ಸ್ಪೆಕ್ಟರ್ ನಾನಾಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.ಕಲಬುರಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.